ವಾರಣಾಸಿ: ವಾಯುಮಾಲಿನ್ಯದಿಂದ ಪಾರಾಗಲು ದೇವರ ಮುಖಗಳಿಗಳಿಗೂ ಮಾಸ್ಕ್ ಹಾಕಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ. ಹೌದು! ವಾರಣಾಸಿಯ ಸಿಗ್ರಾ ಪ್ರದೇಶದ ಜನಪ್ರಿಯ ಶಿವ-ಪಾರ್ವತಿ ದೇವಸ್ಥಾನದಲ್ಲಿ ಶಿವ, ದುರ್ಗಾ ದೇವತೆ, ಕಾಳಿ ಮತ್ತು ಸಾಯಿಬಾಬಾ ವಿಗ್ರಹಗಳ ಬಾಯಿಗೆ ಮಾಸ್ಕ್‌ನಿಂದ ಮುಖವನ್ನು ಮುಚ್ಚಲಾಗಿದೆ.
ಹೀಗೆ ದೇವರಿಗೆ ಮಾಸ್ಕ್‌ನಿಂದ ಮುಚ್ಚಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ದೇವಾಲಯದ ಅರ್ಚಕ ಹರೀಶ್ ಮಿಶ್ರಾ ಬೇಸಿಗೆಯಲ್ಲಿ, ವಿಗ್ರಹಗಳನ್ನು ತಂಪಾಗಿಡಲು ಶ್ರೀಗಂಧದ ಪೇಸ್ಟ್ ಹಾಕಲಾಗುತ್ತದೆ ಚಳಿಗಾಲದಲ್ಲಿ ನಾವು ಅವುಗಳನ್ನು ಉಣ್ಣೆಯಲ್ಲಿ ಮುಚ್ಚುತ್ತೇವೆ. ಅಂತೆಯೇ, ದೇವತೆಗಳೂ ಮುಖವಾಡಗಳನ್ನು ಧರಿಸಬೇಕೆಂದು ಭಕ್ತರು ಹೇಳಿದ್ದು ದೇವರು ಕೂಡ ಮಾಲಿನ್ಯದಿಂದ ಬಳಲ ಬಹುದು ಹಾಗೂ ಅವರ ಮೇಲೆ ಕೂಡ ಪರಿಣಾಮ ಬೀರಬಹುದು ಅಂತ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಲೋಕಸಭಾ ಕ್ಷೇತ್ರವಾದ ವಾರಣಾಸಿ ವಿಪರೀತ ವಾಯುಮಾಲಿನ್ಯಕ್ಕೆ ಹೊರತಾಗಿಲ್ಲ ವಾರಣಾಸಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮತ್ತು ಉತ್ತರ ಪ್ರದೇಶದ ಇತರ ಅನೇಕ ಪಟ್ಟಣಗಳಲ್ಲಿ ಮಂಗಳವಾರ 400 ರಿಂದ 450 ರವರೆಗೆ ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ಸೂಚಿಸಿದೆ.