Monday, January 20, 2025
ಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಲ್ನಾಡು ಘಟಕ ಹಾಗು ವಿನಾಯಕ ಫ್ರೆಂಡ್ಸ್ ಬಲ್ನಾಡು ಇದರ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ-ಕಹಳೆ ನ್ಯೂಸ್

ಬಲ್ನಾಡು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಲ್ನಾಡು ಘಟಕ ಹಾಗು ವಿನಾಯಕ ಫ್ರೆಂಡ್ಸ್ ಬಲ್ನಾಡು ಇದರ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ ಮಾಡಲಾಯಿತು.


ಮರಳಿನಲ್ಲಿ ಅಖಂಡ ಭಾರತದ ಚಿತ್ರ ಬಿಡಿಸಿ, ದೀಪ ಬೆಳಗಿಸಿ ದೇಶಪ್ರೇಮದ ಸಂದೇಶ ಸಾರುವ ಮುಖಾಂತರ ಅರ್ಥಪೂರ್ಣವಾಗಿ ದೀಪಾವಳಿ ಆಚರಣೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಚೇತನ್ ಮುದಲಾಜೆ ಮಾತನಾಡಿ, ” ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ, ಹಾಗಾಗಿ ಈ ವರ್ಷದ ದೀಪಾವಳಿ ಹಿಂದುಗಳ ಪಾಲಿಗೆ ತುಂಬಾ ವಿಶೇಷವಾದ ದೀಪಾವಳಿ” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭ ಪ್ರಮುಖರಾದ ಭರತ್ ಚನಿಲ, ರೂಪೇಶ್ ಬಲ್ನಾಡು, ಶರತ್ ಮುದಲಾಜೆ, ಗುರುರಾಜ್ ಬಲ್ನಾಡು, ಹೇಮಚಂದ್ರ ಬಲ್ನಾಡು ಮುಂತಾದವರು ಉಪಸ್ಥಿತರಿದ್ದರು.