ನೆಲ್ಯಾಡಿ : ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಜ್ಞಾನೋದಯದ ಸ್ಕೌಟ್ ಗೈಡ್ಸ್ ವತಿಯಿಂದ ಸೋಮವಾರ ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ. ಯವರು ಹದಿಹರೆಯದ ಯುವಕ ಯುವತಿಯರು ರಸ್ತೆ ಕಾನೂನುಗಳನ್ನು ಉಲಂಘನೆ ಮಾಡುತ್ತಾರೆ.
ಸುರಕ್ಷಿತ ಚಾಲನೆಯನ್ನು ನಿರ್ವಹಿಸಿದರೆ ಅಪಘಾತ ನಡೆಯುವುದಿಲ್ಲ. ಈ ಸುರಕ್ಷತೆಯ ಜಾಗೃತಿ ಕಾರ್ಯಕ್ತಮವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸ್ಥೆಯ ಖಜಾಂಚಿಯಾದ ರೆ|ಫಾ| ಐಸಕ್ ಸಾಮ್ ಒ.ಐ.ಸಿ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುದರಿಂದ ರಸ್ತೆ ಅಪಘಾತಗಳು ನಡೆಯುವುದಿಲ್ಲ. ಸಂಚಾರಿ ನಿಯಮಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂದು ಒತ್ತು ನೀಡಿ ಹೇಳಿದರು.
ಜನಜಾಗೃತಿ ಕಾರ್ಯಕ್ರಮವನ್ನು ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಪುತ್ತೂರು ಟ್ರಾಫಿಕ್ ಪಿ ಎಸ್ ಐ ಚೆಲುವಯ್ಯ ಇವರು ಮದ್ಯ ವ್ಯಸನದ, ಲೈಂಗಿಕ ದೌರ್ಜನ್ಯ, ರಸ್ತೆ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವೇದಿಕೆಯಲ್ಲಿ ಪುತ್ತೂರು ಟ್ರಾಫಿಕ್ ಹೆಡ್ಕೋನ್ಸ್ಟಬ್ಲ್ ಶಿವಪ್ರಸಾದ್ ಬುಡ್ರಿ ನಾಗರಾಜ್ ಮತ್ತು ಉಪ್ಪಿನಂಗಡಿ ಪೊಲೀಸ್ ಕಾನ್ಸ್ಟಬ್ಲ್ ಹಿತೋಶ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಕುಮಾರಿ ನಿಮ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಅನುಷ್ಕಾ ಖತೀಜಾ ಸ್ವಾಗತಿಸಿ, ಶೆರ್ವಿನ್ ವಂದಿಸಿದರು. ಶ್ರೇಯಾ ಕರ್ಯಕ್ರಮ ನಿರೂಪಿಸಿದರು. ಗೈಡ್ಸ್ ಕ್ಯಾಪ್ಟನ್ ರೇಷ್ಮಾ ಯು, ಲೇಡಿ ಸ್ಕೌಟ್ ಮಾಸ್ಟರ್ ಪ್ರಿಯಾ ದೇವಿ ಹಾಗೂ ಸ್ಕೌಟ್ ಮತ್ತಿ ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದರು.