ಜ್ಞಾನೋದಯ ಬೆಥನಿ ನೆಲ್ಯಾಡಿಯ ವಿದ್ಯಾರ್ಥಿಗಳಾದ ಆದರ್ಶ್ಶೆಟ್ಟಿ ಮತ್ತು ಮೇಘ ಮತ್ತಾಯಿ ರಾಜ್ಯ ಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್
ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರಿಡಾ ಕೂಟವು ದಿನಾಂಕ ಅಕ್ಟೋಬರ್ ೩೦ ಮತ್ತು ೩೧ ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.
ಪ್ರೌಢ ಶಾಲಾ ೧೪ ರ ವಯೋಮಿತಿಯ ಬಾಲಕರ ೮ನೇ ತರಗತಿ ವಿಭಾಗದಲ್ಲಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ೮ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಎತ್ತರ ಜಿಗಿತದಲ್ಲಿ ಪ್ರಥಮ, ೬೦೦ ಮೀ ಓಟದಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೭ ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೇಘ ಮತ್ತಾಯಿ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಅದೇ ರೀತಿ ೧೪ ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ನಿಖಿಲ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಸಂಸ್ಥೆಯ ಸಂಚಾಲಕರಾದ ರೆ| ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ, ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ, ಖಜಾಂಜಿ ರೆ|ಫಾ ಐಸಕ್ ಸಾಮ್ ಒಐಸಿ,ಯವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ. ದೈಹಿಕ ಶಿಕ್ಷಕರಾದ ಮನೋಜ್, ಸುದರ್ಶನ್, ಮತ್ತು ಶ್ರೀಮತಿ ಅಲ್ಪೋನ್ಸಾರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.