Monday, November 18, 2024
ಸುದ್ದಿ

ಸಂಚಾರಿ ನಿಯಮಗಳ ಜನಜಾಗೃತಿ ಕಾರ್ಯಾಗಾರ-ಕಹಳೆ ನ್ಯೂಸ್

ನೆಲ್ಯಾಡಿ: ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ಇತ್ತೀಚೆಗೆ ಹದಿಹರೆಯ ಮತ್ತು ಶಾರೀರಿಕ ಬೆಳವಣಿಗೆ ಬಗ್ಗೆ ಮಾಹಿತಿ ಕಾರ್ಯಾಗಾರವು ಜರುಗಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ.ಯವರು ಮಕ್ಕಳ ಮಾನಸಿಕ ಮತ್ತು ಶಾರೀರಿಕ ಬೆಳವಣೆಗೆಯ ಹಂತದಲ್ಲಿ ತಮ್ಮಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಅತ್ಯಗತ್ಯ ಎಂದು ತಿಳಿಸಿದರು. ಮಣಿಪಾಲದ ಆಸ್ಪತ್ರೆಯ ಡಾ| ಬಿನ್ಸಿ ಎಂ. ಜೋರ್ಜ್ , ಡಾ| ಸೋಯುಝ್ ಜೋನ್ ಮತ್ತು ರೆ| ಫಾ| ಸಲಿನ್ ಜೋಸೆಫ್‌ರವರು ಈ ಕಾರ್ಯಾಗಾರವನ್ನು ನಿರ್ವಹಿಸಿ ಕೊಟ್ಟರು. ಇಂಗ್ಲೀಷ್ ಕ್ಲಬ್‌ನ ಆಯೋನಾಕಾರರಾಗಿ ಅಧ್ಯಾಪಕರಾದ ಜೋಸ್ ಪ್ರಕಾಶ್ , ಮಂಜು ಫಿಲಿಪ್, ವೇರೋನಿಕಾ ಮತ್ತು ಲಿಸ್ಸಿಯವರು ಸಹಕರಿಸದರು. ಈ ಸಂದರ್ಭದಲ್ಲಿ ರೆ|ಫಾ ಐಸಕ್ ಸಾಮ್ ಒಐಸಿ, ಉಪಸ್ಥಿತರಿದ್ದರು. ಕುಮಾರಿ ರಕ್ಷಾ ಮತ್ತು ತಂಡ ಪ್ರಾರ್ಥಿಸಿದರು. ಕುಮಾರಿ ಬಿಫಿನ ಸ್ವಾಗತಿಸಿ, ಕುಮಾರಿ ಅನುಷ್ಕಾ ಖತೀಜಾ ವಂದಿಸಿದರು. ಕುಮಾರಿ ರೋಸ್ಲೀನಾ ಕರ‍್ಯಕ್ರಮ ನಿರೂಪಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು