ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಕ್ಕೆ ಬೆಳ್ಳಿ ಪದಕ ಪಡೆದು ಕೀರ್ತಿ ತಂದುಕೊಟ್ಟ ರಮ್ಯಶ್ರೀ ಜೈನ್ ಅವರನ್ನು ಹುಟ್ಟೂರು ಸಿದ್ದಕಟ್ಟೆ ಹಾಗೂ ಗುಣಶ್ರೀ ವಿದ್ಯಾಲಯದ ಪರವಾಗಿ ಅದ್ದೂರಿ ಸ್ವಾಗತ -ಕಹಳೆ ನ್ಯೂಸ್
ಬಂಟ್ವಾಳ :- ಸಿದ್ದಕಟ್ಟೆ ಯ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಆಂಧ್ರಪ್ರದೇಶ ದ ಗುಂಟೂರಿನಲ್ಲಿ ನಡೆದ 35 ನೇ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಫ್ -2019 ರಲ್ಲಿ 16 ವರ್ಷ ಒಳಗಿನ ಚಾವೆಲಿನ್ ಎಸೆತದಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಖೋಲೋ ಇಂಡಿಯಾ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಫ್ -2019 ಕ್ಕೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯ ಕ್ಕೆ ಬೆಳ್ಳಿ ಪದಕ ಪಡೆದು ಕೀರ್ತಿ ತಂದುಕೊಟ್ಟ ರಮ್ಯಶ್ರೀ ಜೈನ್ ಅವರನ್ನು ಹುಟ್ಟೂರು ಸಿದ್ದಕಟ್ಟೆ ಹಾಗೂ ಗುಣಶ್ರೀ ವಿದ್ಯಾಲಯದ ಪರವಾಗಿ ಅದ್ದೂರಿ ಯಾಗಿ ಸ್ವಾಗತ ಮಾಡಲಾಯಿತು.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಯ ಗುಣಶ್ರೀ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಬಿ. ನಾಗರಾಜ ಶೆಟ್ಟಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ರಮ್ಯಶ್ರೀ ಜೈನ್ ಅವರ ಹೆತ್ತವರು ಉಪಸ್ಥಿತರಿದರು.