Sunday, November 17, 2024
ಸುದ್ದಿ

ಮಂಗಳೂರು: ‘ಪಾಲಿಕೆ ಚುನಾವಣೆ ಫಲಿತಾಂಶದ ದಿನ ಕಾಂಗ್ರೆಸ್ ಕಣ್ಣೀರು ಸುರಿಸಲಿದೆ’ – ಜನಾರ್ದನ ಪೂಜಾರಿ-ಕಹಳೆ ನ್ಯೂಸ್

ಮಂಗಳೂರು: ಮುಂಬರುವ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಜಯಸಾಧಿಸುತ್ತದೆ. ಫಲಿತಾಂಶದ ದಿನ ಅಂದರೆ ನ. 14 ರಂದು ಕಾಂಗ್ರೆಸ್ ಕಣ್ಣೀರು ಸುರಿಸಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ.

ನ.8ರ ಶುಕ್ರವಾರದಂದು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಜನಾರ್ದನ ಪೂಜಾರಿ, “ಕಾಂಗ್ರೆಸ್ ಪಕ್ಷ ಅತ್ಯುತ್ತಮವಾದುದು, ಆದರೆ ಅಲ್ಲಿನ ನಾಯಕರುಗಳಿಗೆ ಹೇಗೆ ಮಾತನಾಡಬೇಕೆನ್ನುವುದೇ ತಿಳಿದಿಲ್ಲ ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಚುನಾವಣೆ ಗೆಲ್ಲುತ್ತದೆ ಮತ್ತು ನವೆಂಬರ್ 14 ನಿರ್ಣಾಯಕ ದಿನವಾದ್ದರಿಂದ ಕಾಂಗ್ರೆಸ್ ಅದರ ನೇರ ಪರಿಣಾಮಗಳನ್ನು ಎದುರಿಸಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಯೋಧ್ಯೆ ತೀರ್ಪು ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ಅಯೋಧ್ಯೆ ತೀರ್ಪು ಹೊರಬೀಳುವಾಗ ಪ್ರತಿಯೊಬ್ಬರು ಶಾಂತಿ ಸಾಮರಸ್ಯ ಕಾಪಾಡಬೇಕು. ನ್ಯಾಯಾಂಗದ ತೀರ್ಪಿಗೆಗೆ ಎಲ್ಲರೂ ಗೌರವ ಕೊಡಬೇಕು. ಈ ವಿಚಾರವಾಗಿ ಎಲ್ಲರೂ ಸಹಕರಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಿಎಂ ಯಡಿಯೂರಪ್ಪ ಆಡಿಯೋ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು , “ನ್ಯಾಯಾಲಯ ಆಡಿಯೋವನ್ನು ಪರಿಗಣಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಕಪಟ ತಂತ್ರ ಪುನರ್ ವರ್ತನೆಯಾಗದಂತೆ ನೋಡಿಕೊಳ್ಳಬೇಕು. ಚುನಾವಣೆಯಲ್ಲಿ ಜನಾಭಿಪ್ರಾಯ ಮೂಲಕ ಅಧಿಕಾರ ನಡೆಸಿದ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕೀಯಕ್ಕೆ ಹೊರಟಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ” ಎಂದು ಹೇಳಿದರು.

ಸಿದ್ಧರಾಮಯ್ಯ ಆಡಳಿತ ಕಾಲದಲ್ಲಿ ಮಂಗಳೂರಿಗೆ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,”ಇದು ಸುಳ್ಳು ಎಂದು ಸಿದ್ದರಾಮಯ್ಯ ಸತ್ಯ ಮಾತನಾಡಿದ್ದಾರೆಯೇ?” ಆರೋಪಿಸಿದರು.

ಮದ್ಯದಂಗಡಿಗಳಿಗಿರುವ ದೇವರ ಹೆಸರನ್ನು ತೆಗೆದುಹಾಕುವ ಪ್ರಸ್ತಾಪದ ಬಗ್ಗೆ ಕೇಳಿದಾಗ, ಬಿ ಜನಾರ್ಧನ ಪೂಜಾರಿ, “ಮದ್ಯದಂಗಡಿಗಾಗಿ ದೇವರ ಹೆಸರನ್ನು ತೆಗೆದುಹಾಕುವ ಪ್ರಸ್ತಾಪದ ಸರಿಯಾದ ನಿರ್ಧಾರವಾಗಿದೆ” ಎಂದರು.

ಕಾಂಗ್ರೆಸ್ ಮುಖಂಡರಾದ ಕಲ್ಲಿಗೆ ತಾರನಾಥ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.