ನವದೆಹಲಿ : ರಾಮ್ ಜನ್ಮಭೂಮಿ – ಬಾಬರಿ ಮಸೀದಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಾಳೆ ಮಹತ್ತರದ ತೀರ್ಪು ಪ್ರಕಟಿಸಲಿದೆ.
ಯೆಸ್, ನಾಳೆ ಬೆಳಗ್ಗೆ 10:30 ಕ್ಕೆ ಸುಪ್ರೀಂಕೋರ್ಟ್ ಐತಿಹಾಸಿಕ ಅಯೋಧ್ಯಾ ಅಂತಿಮ ತೀರ್ಪು ಪ್ರಕಟಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ , ಈ ಹಿನ್ನೆಲೆ ಇಡೀ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಸೂಕ್ಷ್ಮ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರಕಾರ ಸಂದೇಶವನ್ನು ರವಾನಿಸಿದೆ. ಅಲ್ಲದೇ ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ .
ಅಯೋಧ್ಯಾ ಪ್ರಕರಣದ ತೀರ್ಪು ಹೊರಬೀಳುವ ಸಮಯದಲ್ಲಿ, ದೇಶದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಅನ್ನೋ ಕಾರಣಕ್ಕಾಗಿ ಗೃಹ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇಂಟರ್‌ನೆಟ್‌ನಲ್ಲಿ ನಡೆಯುವ ಕಿಡಿಗೇಡಿತನವನ್ನೂ ಮಟ್ಟ ಹಾಕಲು ಸೈಬರ್ ಪೊಲೀಸರು ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.