Recent Posts

Sunday, November 17, 2024
ಸುದ್ದಿ

ಅಯೋಧ್ಯಾ ಐತಿಹಾಸಿಕ ತೀರ್ಪು: ಕ್ಷಣಕ್ಷಣದ ಮಾಹಿತಿ ನಿಮ್ಮ ಕಹಳೆ ನ್ಯೂಸ್ ವೆಬ್​ಸೈಟ್​ನಲ್ಲಿ- ಕಹಳೆ ನ್ಯೂಸ್

ರಾಷ್ಟ್ರದ ಕೋಟ್ಯಂತರ ಜನರು ಕುತೂಹಲದಿಂದ ಕಾಯುತ್ತಿರುವ ಅಯೋಧ್ಯಾ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್​ ಇಂದು ಬೆಳಗ್ಗೆ 10.30ಕ್ಕೆ ನೀಡಲಿದೆ.

ಈ ಐತಿಹಾಸಿಕ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಸಿಜೆಐ ರಂಜನ್​ ಗೊಗೊಯಿ ಅವರು ಸುಪ್ರೀಂಕೋರ್ಟ್​ಗೆ ಆಗಮಿಸಲಿದ್ದು ಈಗಾಗಲೇ ಅವರ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುತೇಕ ರಾಜ್ಯಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತೀರ್ಪು ಏನೇ ಬಂದರೂ ಸರಿ ಶಾಂತಿ, ಸಂಯಮದಿಂದ ಇರಬೇಕು. ಯಾವುದೇ ಪ್ರಚಯೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲೂ ಸಹ ಖಾಕಿ ಪಡೆ ಅಲರ್ಟ್​ ಆಗಿದ್ದು ಕೊಡ ಎಲ್ಲ ಜಿಲ್ಲೆಗಳಲ್ಲೂ ಸೂಕ್ತ ಭದ್ರತೆ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಹ ಪ್ರಚೋದನಾತ್ಮಕ ಪೋಸ್ಟ್​ಗಳನ್ನು ಹಾಕಬಾರದು ಎಂದು ಆಯಾ ಜಿಲ್ಲಾಧಿಕಾರಿಗಳು ಖಡಕ್​ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ವೀಟ್​ ಮಾಡಿದ್ದು, ಶತಮಾನದಷ್ಟು ಹಳೆಯದಾದ ಅಯೋಧ್ಯಾ ತೀರ್ಪನ್ನು ಇಂದು ಸುಪ್ರೀಂಕೋರ್ಟ್​ ಪ್ರಕಟಿಸಲಿದ್ದು ಯಾರ ಪರವಾಗಿಯೇ ಬಂದರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮುಸೌಹಾರ್ದ ಕದಡದೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.