Tuesday, January 21, 2025
ರಾಜಕೀಯ

Breaking News : ಸರ್ವಧರ್ಮ ಸಮನ್ವಯದ ತೀರ್ಪು ; ಅಯೋಧ್ಯೆ ಪ್ರಭು‌ ಶ್ರೀರಾಮನ ಜನ್ಮಭೂಮಿ, ರಾಮ ಮಂದಿರ ನಿರ್ಮಿಸಿ – ಮಸೀದಿ ನಿರ್ಮಾಣಕ್ಕೆ ಐದು‌ ಎಕರೆ ಬದಲಿ ಜಾಗ ನೀಡಿ – ಸುಪ್ರೀಂ ತೀರ್ಪು – ಕಹಳೆ ನ್ಯೂಸ್

ನವದೆಹಲಿ: ಅಯೋಧ್ಯೆ ತೀರ್ಪನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್‍ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಪೀಠ ಬೆಳಗ್ಗೆ 10.30ಕ್ಕೆ ತನ್ನ ತೀರ್ಪನ್ನು ಪ್ರಕಟಿಸಿದೆ.
ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ ನಿಂದ ‘ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಅಯೋಧ್ಯೆಯಲ್ಲಿ ರಾಮ ಮಂದಿರನ್ನು ಕಟ್ಟುವ ಕೆಲಸವನ್ನು ಸರಕಾರಕ್ಕೆ ನೀಡಿದೆ.

ಆಗಸ್ಟ್ 6 ರಿಂದ ಸುಪ್ರೀಂ ಕೋಟ್ ದಿನನಿತ್ಯ ವಿಚಾರಣೆಯನ್ನು ಆರಂಭ ಮಾಡಿತ್ತು. 40 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿದ ಸಂವಿಧಾನ ಪೀಠ ಅಕ್ಟೋಬರ್16ಕ್ಕೆ ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ಅಯೋಧ್ಯೆ ವಿವಾದವನ್ನು ಪರಿಹರಿಸಿಕೊಳ್ಳಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್‍ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ ಈ ವಿವಾದವನ್ನು ಬಗೆಹರಿಸಲು ಸಮಿತಿ ವಿಫಲವಾದ ಹಿನ್ನೆಲೆಯಲ್ಲಿ ಸಂವಿಧಾನ ಪೀಠ ದಿನನಿತ್ಯ ವಿಚಾರಣೆ ನಡೆಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಯಾಪೀಠ ಇಂದು ಏನು ಹೇಳಿತು?

ಜಾಹೀರಾತು
ಜಾಹೀರಾತು
ಜಾಹೀರಾತು

* ಶಿಯಾಗೆ ಭೂಮಿ ಮೇಲೆ ಯಾವುದೇ ಹಕ್ಕಿಲ್ಲ
* ನಿರ್ಮೋಹಿ ಅಖಾಡದ ಅರ್ಜಿ ವಜಾ
* ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯತೆ ಮಾಡಿದೆ
* ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ
* ಕಂದಾಯ ದಾಖಲೆ ಪ್ರಕಾರ
* ಮಸೀದಿ ಅಡಿಪಾಯದ ಕೆಳಗೆ ವಿಶಾಲವಾದ ರಚನೆ ಇತ್ತು, ಇದು ಇಸ್ಲಾಂಮಿಕ ರಚನೆ ಆಗಿರಲಿಲ್ಲ
* ಉತ್ಖನನ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಮಿಕ್ ಅಗಿರಲಿಲ್ಲ

* ಹಿಂದುಗಳು ಅಯೋಧ್ಯೆಯನ್ನು ರಾಮ ಜನ್ಮ ಭೂಮಿ ಎಂದು ನಂಬುತ್ತಾರೆ, ವಿವಾದಿತ ಜಾಗದಲ್ಲೇ ಹಿಂದುಗಳು ಪೂಜೆ ಮಾಡುತ್ತಾ ಬಂದಿದ್ದಾರೆ.

* ಕಾನೂನಿನ ಸಾಕ್ಷ್ಯದ ಆಧಾರ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.

*  ವಿವಾಧಿತ ಪ್ರದೇಶದಲ್ಲಿ 1856 ರಿಂದ1857ರವರೆಗೆ ನಮಾಜ್ ಮಾಡಲಾಗುತ್ತಿತ್ತು ಅನ್ನುವುದಕ್ಕೆ ಸಾಕ್ಷಿ ಇಲ್ಲ.

2010ರಲ್ಲಿ ಅಲಹಾಬಾದ್ ಕೋರ್ಟ್ ತೀರ್ಪೆನು?
ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗ ಸಮಾನ ಹಂಚಿಕೆ ಮಾಡಿತ್ತು. ವಿವಾದಿತ 2.77 ಎಕರೆಗ ಭೂಮಿ 3 ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿತ್ತು.