Tuesday, January 21, 2025
ಸುದ್ದಿ

ರಂಗೇರುತ್ತಿರುವ ಮನಪಾ ಚುನಾವಣೆ : ಪಾಂಡೇಶ್ವರದ ಜನತೆಯ ಚಿತ್ತ, ಸುರೇಶ್ ಶೆಟ್ಟಿಯತ್ತ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ಗೊಂದಲಗಳು ಮೂಡಿ ಪಕ್ಷಗಳ ಒಳಗಿನ ಒಡಕುಗಳನ್ನು ಸರಿ ಮಾಡಿಕೊಳ್ಳುವುದೇ ಅಭ್ಯರ್ಥಿಗಳಿಗೆ ಹರಸಾಹಸದ ಕೆಲಸವಾಗಿ ಬಿಟ್ಟಿದೆ.

ಇದರ ನಡುವೆ ಜನರನ್ನು ಮನವೊಲಿಸುವುದು ಅಷ್ಟು ಸುಲಭವಲ್ಲ. ಹೀಗಿರುವಾಗಲೇ 46ನೇ ಕಂಟೋನ್ಮೆಂಟ್ ವಾರ್ಡ್ ಪಾಂಡೇಶ್ವರದ ಪಕ್ಷೇತರ ಅಭ್ಯರ್ಥಿ ಸುರೇಶ್ ಶೆಟ್ಟಿಯವರು ಮಾತ್ರ ಹೋದಲ್ಲೆಲ್ಲ ಜನರನ್ನು ಆಕರ್ಷಿಸುತ್ತಾ ಜನಮಾನಸವನ್ನು ಹಿಡಿದಿಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷ ಸಿದ್ದಾಂತಗಳಿಗೆ ಜೋತು ಬಿದ್ದಿರುವವರು ಕೂಡ ಈ ಬಾರಿ ಬದಲಾವಣೆ ಬಯಸಿ ಸುರೇಶ್ ಶೆಟ್ಟಿ ಯವರ ಪರ ನಿಲ್ಲುತ್ತಿದ್ದಾರೆ. ಇವರು ಪ್ರಚಾರ ಕಾರ್ಯಕ್ಕೆ ಹೋದಲ್ಲೆಲ್ಲ ಮಕ್ಕಳು, ಮರಿ, ಹಿರಿಯ ನಾಗರೀಕರು, ಯುವಕರೆನ್ನದೆ ಎಲ್ಲರೂ ಇವರನ್ನು ಮುತ್ತಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕರಿಗೆ ಸುರೇಶಣ್ಣನಾಗಿ, ಮಕ್ಕಳಿಗೆ ಸುರೇಶ್ ಅಂಕಲ್ ಆಗಿ, ಹಿರಿಯರಿಗೆ ಮಗನಾಗಿ ದಿನೇ ದಿನೇ ಆಪ್ತರಾಗುತ್ತಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಅತ್ಯಂತ ಸ್ಪಷ್ಟ ದೂರದೃಷ್ಟಿತ್ವ ಹೊಂದಿರುವ ಇವರು ತನ್ನ ವಾರ್ಡ್‍ನ ಪ್ರತಿ ಸಮಸ್ಯೆಗೂ ಶಾಶ್ವತ ಪರಿಹಾರದ ಯೋಜನೆ ಇಟ್ಟುಕೊಂಡಿದ್ದಾರೆ. ದಶಕಗಳಿಂದ ಅಭಿವೃದ್ಧಿ ಕಾಣದೆ ಸಮಸ್ಯೆಗಳಿಂದ ರೋಸಿ ಹೋಗಿರುವ ಪಾಂಡೇಶ್ವರದ ಜನತೆಗೆ ಸುರೇಶ್ ಶೆಟ್ಟಿ ಅವರ ಆಯ್ಕೆ ಸದ್ಯಕ್ಕೆ ತುಸು ಸಮಾಧಾನ ತಂದಿದೆ.