ಕೇರಳ : ಬಹುಭಾಷಾ ನಟಿ, ಮೋಹಕ ತಾರೆ ಅಮಲಾ ಪಾಲ್ ರನ್ನು ಪೊಲೀಸರು ಬಂಧಿಸಿದ್ದಾರೆ. ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿ ಜನಮನಗೆದ್ದಿದ್ದ ಅಮಲಾ ಪಾಲ್ ರನ್ನು ಕೇರಳದ ಪೊಲೀಸರು ಬಂಧಿಸಿದ್ದರು, ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಅಮಲಾ ಪಾಲ್ ಕಳೆದ ಕೆಲ ದಿನಗಳ ಹಿಂದೆ ಕೋಟಿ ಕೊಟ್ಟು ಕಾರು ಖರೀದಿಸಿದ್ದರು. ಈ ವೇಳೆ ತಪ್ಪು ವಿಳಾಸ ನೀಡಿ ಪಾಂಡಿಚೇರಿಯಲ್ಲಿ ಕಾರನ್ನು ರಿಜಿಸ್ಟರ್ ಮಾಡಿಸಿದ್ದರು. ಇದರಿಂದಾಗಿ ಅವರು 20 ಲಕ್ಷ ತೆರಿಗೆ ಹಣ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಕೇರಳದಲ್ಲಿ ಅಮಲಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರ ಐಷಾರಾಮಿ ಕಾರು ಖರೀದಿಸುವ ಮೋಹ ಅವರನಾನು ಅರೆಸ್ಟ್ ಮಾಡುವವರೆಗೆ ಕೊಂಡೊಯ್ದಿದೆ.
ಅಮಲಾ ಪಾಲ್ ಕೇರಳ ಹೈಕೋರ್ಟ್ಗೆ ಜಾಮೀನು ಕೋರಿ ಮೊದಲೇ ಅರ್ಜಿ ಸಲ್ಲಿಸಿದ್ದರು. ಆದರೆ ಕ್ರೈಂ ಬ್ರ್ಯಾಂಚ್ ಎದುರು ಹಾಜರಾಗಬೇಕು ಎಂದು ನ್ಯಾಯಾಲಯ ಆದೇಶಿಸಿತು. ಹೀಗಾಗಿ ಅಮಲಾ ತಿರುವನಂತಪುರಂನಲ್ಲಿರುವ ಕ್ರೈಂ ಬ್ರ್ಯಾಂಚ್ ಪೊಲೀಸರ ಮುಂದು ಹಾಜರಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ನ್ಯಾಯಾಲಯ ಅಮಲಾಗೆ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಅರೆಸ್ಟ್ ಆದ ನಟಿ ಜಾಮೀನು ಪಡೆದು ಹೊರಬಂದು ನಿಟ್ಟುಸಿರು ಬಿಟ್ಟರು.
ವರದಿ : ಕಹಳೆ ನ್ಯೂಸ್