Wednesday, January 22, 2025
ಸುದ್ದಿ

46ನೇ ಕಂಟೋನ್ಮೆಂಟ್ ವಾರ್ಡ್ ಪಾಂಡೇಶ್ವರದ ಜನತೆಯ ಗೋಳಿನ ಕಥೆ-ಕಹಳೆ ನ್ಯೂಸ್

ಮಹಾನಗರ ಪಾಲಿಕೆ ಚುನಾವಣೆಯ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಮತದಾರರು ಕೂಡ ಮನೆಬಾಗಿಲಿಗೆ ಮತಯಾಚನೆಗೆ ಬರುತ್ತಿರುವವರನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದು ಕೆಲಸ ಮಾಡದೇ ಇರುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆ.

ಹೌದು ನಾವು ಹೇಳ ಹೊರಟಿರುವುದು 46ನೇ ಕಂಟೋನ್ಮೆಂಟ್ ವಾರ್ಡ್ ಪಾಂಡೇಶ್ವರದ ಜನತೆಯ ಗೋಳಿನ ಕಥೆಯನ್ನು ನೀವು ಪಾಂಡೇಶ್ವರದ ಧೂಮಪ್ಪ ಕಾಂಪೌಂಡ್‍ಗೆ ಹೋದರೆ ಸಾಕು ಅಲ್ಲಿ ಕೊಳೆತು ನಾರುವ ಚರಂಡಿಯ ವಾಸನೆ ನಿಮ್ಮನ್ನು ಸ್ವಾಗತಿಸುತ್ತದೆ. ಸುಮಾರು 500 ರಿಂದ 600 ಮನೆಗಳನ್ನು ಹೊಂದಿರುವ ಈ ವಾರ್ಡ್‍ನಲ್ಲಿ ಕಳೆದ 5-6 ವರ್ಷಗಳಿಂದ ತೆರೆದ ಚರಂಡಿ ರಾಕ್ಷಸನಂತೆ ಜನರ ಆರೋಗ್ಯ ಮತ್ತು ನೆಮ್ಮದಿಯನ್ನು ಕಿತ್ತು ತಿನ್ನುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಂಡೇಶ್ವರದ ಪೆÇಲೀಸ್ ಲೈನ್‍ನಿಂದ ಶ್ರೀನಿವಾಸ ಕಾಲೇಜ್‍ನ ಉದ್ದಕ್ಕೂ ತೆರೆದು ನಿಂತಿರುವ ಈ ಚರಂಡಿಗೆ ಹೆಚ್ಚಿನ ಮನೆಗಳ ಶೌಚಾಲಯದ ತ್ಯಾಜ್ಯ, ಬಿಲ್ಡಿಂಗ್‍ಗಳ ಕಸ ಕೊಳಚೆಗಳೆಲ್ಲ ಈ ಚರಂಡಿಗೆ ಹರಿದು ಕೊಳೆತು ನಾರುವ ವಾಸನೆ ಊರೆಲ್ಲ ಹರಡುತ್ತಿದೆ. ಪ್ರತಿನಿತ್ಯ ಮೂಗು ಮುಚ್ಚಿ ಬದುಕುತ್ತಿರುವ ಇಲ್ಲಿನ ಜನತೆಗೆ ಡೆಂಗ್ಯೂ ನಂತಹ ಮಾರಕ ಕಾಯಿಲೆಗಳು ಹೆಚ್ಚುವರಿ ಬಳುವಳಿಯಾಗಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮಳೆಗಾಲದಲ್ಲಿ ಇಲ್ಲಿನ ಜನರ ಗೋಳು ಕೇಳಲೇ ಬಾರದು. ಮಳೆನೀರು ಹರಿಯಲು ಜಾಗವಿಲ್ಲದೆ ಚರಂಡಿ ತುಂಬಿ ನೀರು ರಸ್ತೆ ಮೇಲೆ ಹರಿದು ಬರುತ್ತದೆ. ಮಳೆ ಸ್ವಲ್ಪ ಜೋರಾಗಿ ಬಂದರೂ ಸಾಕು ಕೊಳಚೆ ನೀರುಗಳೆಲ್ಲ ಹರಿದು ಮನೆಯ ಒಳಗೆ ಬಂದು ಬಿಡುತ್ತವೆ. ಕೆಟ್ಟ ವಾಸನೆ ಸಾಂಕ್ರಾಮಿಕ ರೋಗಗಳಿಂದ ರೋಸಿ ಹೋಗಿರುವ ಈ ಚರಂಡಿಗೊಂದು ಮುಕ್ತಿ ಕೊಡಿಸುವ ಸೂಕ್ತ ವ್ಯಕ್ತಿಗಾಗಿ ಕಾಯುತ್ತಿದ್ದಾರೆ.

ಇದಕ್ಕೆ ಪರಿಹಾರ ದೊರಕಿಸಬೇಕಾದ ಸ್ಥಳೀಯ ಕಾಪೆರ್Çರೇಟರ್ ಈ ಕಡೆ ತಲೆ ಹಾಕಿಯೂ ಮಲಗಿಲ್ಲ. ಕೆಲಸ ಮಾಡದ ಕಾಪೆರ್Çರೇಟರ್ ಅನ್ನು ಬಡಿದೆಬ್ಬಿಸಿ ಕೆಲಸ ಮಾಡಿಸಬೇಕಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರು ಕೂಡ ಇದಕ್ಕೂ ನಮಗೂ ಸಂಬಂಧವೇ ಇಲ್ಲವೆನ್ನುವಂತೆ ಮೌನವಾಗಿದ್ದಾರೆ. ಚರಂಡಿ ದುರಸ್ಥಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನವಾಗಲಿ ಅಥವಾ ತಾತ್ಕಾಲಿಕವಾಗಿ ಸಮಸ್ಯೆಯನ್ನು ಸರಿಪಡಿಸುವ ಪ್ರಯತ್ನವಾಗಲಿ ಇದುವರೆಗೂ ನಡೆದಿಲ್ಲ.

ಗಂಭೀರ ಸಮಸ್ಯೆಗಳಿದ್ದಾಗಿಯೂ ತಲೆ ಕೆಡಿಸಿಕೊಳ್ಳದ ಬಿಜೆಪಿ ಹಾಗೂ ಕಾಂಗ್ರೆಸ್ ನ ಸ್ಥಳೀಯ ನಾಯಕರ ಮೇಲೆ ಜನ ತೀವ್ರ ಅಸಮಾಧಾನಗೊಂಡಿದ್ದು ಮನೆ ಬಾಗಿಲಿಗೆ ವೋಟು ಕೇಳಲು ಹೋಗುತ್ತಿರುವ ಎರಡೂ ಪಕ್ಷದ ನಾಯಕರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಾಪೆರ್Çರೇಟರ್ ಆಗಿರುವ ಬಿಜೆಪಿಯ ದಿವಾಕರ್ ಅವರಿರಬಹುದು ಅಥವಾ ಮೊನ್ನೆ ಮೊನ್ನೆ ಬಿಜೆಪಿ ಇಂದ ಪಕ್ಷಾಂತರಗೊಂಡು ಕಾಂಗ್ರೆಸ್ ನಿಂದ ಟಿಕೆಟ್ ಗಿಟ್ಟಿಸಿಕೊಂಡಿರುವ ಭಾಸ್ಕರ್ ಅವರಿರಬಹುದು ಈ ಬಾರಿ ಜನರ ಮನಸ್ಸು ಗೆದ್ದು ವೋಟು ಪಡೆದು ಗೆಲ್ಲುವುದು ಕಷ್ಟವೇ ಸರಿ. ಪಕ್ಷಗಳ ಅಡ್ಜಸ್ಟ್ಮೆಂಟ್ ರಾಜಕಾರಣದಲ್ಲಿ ಬಲಿಯಾಗುತ್ತಿರುವುದು ನಾಗರೀಕರು. ಹಾಗಾಗಿ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬಲ್ಲ ಅರ್ಹ ಅಭ್ಯರ್ಥಿಗೆ ಜನ ಮಣೆ ಹಾಕಿದಲ್ಲಿ ಈ ಸಮಸ್ಯೆ ಬಗೆಹರಿಯಬಹುದು.