Tuesday, January 21, 2025
ಸಿನಿಮಾ

ಮುಂಜಾನೆ ಒಬ್ಬಳೇ ರೂಮಿಗೆ ಬಾ ಎಂದ ಖ್ಯಾತ ನಟ: ಅದಕ್ಕೆ ನಟಿ ಇಶಾ ಕೊಟ್ಟ ಉತ್ತರವೇನು ಗೊತ್ತಾ ?- ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಲ್ಲಿ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಇಶಾ ಕೋಪ್ಪಿಕರ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಿನಿಮಾ ಶೂಟಿಂಗ್ ವೇಳೆ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಮಿಳು, ಕನ್ನಡ , ತೆಲುಗು , ಮರಾಠಿ ಸೇರಿದಂತೆ ಬಹುಭಾಷೆಗಳಲ್ಲಿ ನಾಯಕಿಯಾಗಿ ನಟಿಸಿರುವ ಇಶಾ ಕೋಪ್ಪಿಕರ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡುತ್ತಿರುವ ವಿಚಾರ. ಇತ್ತೀಚಿಗೆ ಹಲವು ನಟಿಯರು ಈ ಕುರಿತು ಮುಕ್ತವಾಗಿ ಮಾತನಾಡಿ ಆಕ್ರೋಶ ವ್ಯಕತಪಡಿಸಿದ್ದರು. ಈಗ ಇಶಾ ಕೋಪ್ಪಿಕರ್ ಕೂಡ ತಮಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ವೇಳೆ ಕೆಲವು ಸಹನಟರು ಲೈಂಗಿಕ ಸಂಬಂಧಕ್ಕೆ ಸಹಕರಿಸುವಂತೆ ಒತ್ತಾಯಿಸಿದ್ದರು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಹನಟನೊಬ್ಬನನ್ನು ಮುಂಜಾನೆ ಭೇಟಿಯಾಗುವಂತೆ ನನಗೆ ತಿಳಿಸಲಾಗಿತ್ತು. ಅದನ್ನು ನಾನು ಕೂಡ ಒಪ್ಪಿಕೊಂಡಿದ್ದೆ. ಆದರೇ ಆತ ನಂತರ ಫೋನ್ ಮಾಡಿ ಯಾರ ಜೊತೆ ಬರುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ನಾನು ಡ್ರೈವರ್ ಜೊತೆಗೆ ಬರುತ್ತಿದ್ದೇನೆ ಎಂದು ಉತ್ತರಿಸಿದ್ದೆ. ಅದಕ್ಕೆ ಆತ ಅವರೆಲ್ಲಾ ಬರುವುದು ಬೇಡ. ಸುಮ್ಮನೆ ವದಂತಿ ಸೃಷ್ಟಿಸುತ್ತಾರೆ ಎಂದರು. ನಾನು ವಿರೋಧ ವ್ಯಕಪಡಿಸಿ ನಾನ್ಯಾಕೆ ಒಬ್ಬಳೆ ಬರಲಿ ಎಂದು ವಿಚಾರಿಸಿದ್ದೆ. ಆತ ಯಾಕೆ ಕರೆಯುತ್ತಿದ್ದಾನೆಂದು ನನಗೆ ಅವಾಗ ತಿಳಿಯಿತು. ಅದಕ್ಕೆ ನಾನೀಗ ಫ್ರೀ ಇಲ್ಲಾ, ಇನ್ನೊಮ್ಮೆ ಭೇಟಿಯಾಗೋಣ ಎಂದು ಪೋನ್ ಕಟ್ ಮಾಡಿದೆ.

ಕೂಡಲೇ ನಾನು ನಿರ್ಮಾಪಕರಿಗೆ ಕರೆ ಮಾಡಿ, ನಿಮಗೆ ಪ್ರತಿಭೆ ಮುಖ್ಯವೆಂದಾದರೆ ಮಾತ್ರ ನಾನಿಲ್ಲಿ ಇರುತ್ತೇನೆ. ನನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದರೆ ನಾನು ಮಾಡಬಾರದ್ದನ್ನು ಮಾಡಲು ಸಿದ್ಧಳಿಲ್ಲ. ಒಂದು ಪಾತ್ರಕ್ಕಾಗಿ ಹೀಗೆಲ್ಲ ಇರಲು ಸಾಧ್ಯವೇ ಇಲ್ಲವೆಂದು ಹೇಳಿದೆ. ಕೆಲವು ನಟರಿಗೆ ಇದೇ ಮಾತನ್ನು ಹೇಳಿದ್ದೇನೆ. ಓರ್ವ ಮಹಿಳೆ ‘ಇಲ್ಲ’ ಎಂದು ಹೇಳಿದರೆ ಅದನ್ನು ಅವರು ಒಪ್ಪುವುದಿಲ್ಲ ಎಂದು ಇಶಾ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.