Monday, January 20, 2025
ಸುದ್ದಿ

ಅವಳು ಓಡಿ ಬಂದ್ಲು, ಅವನು ತಾಳಿ ಕಟ್ದ – ಕುರಿಗಾಹಿ ಜೊತೆ ಎಂಎ ವಿದ್ಯಾರ್ಥಿನಿಯ ಕಲ್ಯಾಣ-ಕಹಳೆ ನ್ಯೂಸ್

ಚಿತ್ರದುರ್ಗ: ಸಾಮಾನ್ಯವಾಗಿ ಪ್ರೇಮಿಗಳು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗುವುದನ್ನು ನೋಡಿದ್ದೇವೆ. ಆದರೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿಯಲ್ಲಿ ಸಿನಿಮಾ ಶೈಲಿಯಲ್ಲಿ ವಿಭಿನ್ನವಾಗಿ ಪ್ರೇಮ ವಿವಾಹವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುರಿಗಾಹಿ ಅರುಣ್ ಜೊತೆ ಎಂಎ ಪದವಿ ವಿದ್ಯಾರ್ಥಿನಿ ಅಮೃತಾ ಪ್ರೇಮ ವಿವಾಹ ಮಾಡಿಕೊಂಡಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಪೋಷಕರ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಓಡಿಬಂದು ಇಬ್ಬರು ಮದುವೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಎಂದರೆ ಕುರಿಮೇಯಿಸುವ ಸ್ಥಳದಲ್ಲೇ ಈ ಜೋಡಿಯ ವಿವಾಹವಾಗಿದೆ. ಇದೀಗ ನಿನಿಮಾ ಮಾದರಿ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಡುಗ ಕುರಿಮೇಯಿಸುತ್ತಿರುತ್ತಾನೆ. ಇತ್ತ ಹುಡುಗಿ ಅಮೃತಾ ಓಡಿ ಬಂದಿದ್ದಾಳೆ. ಆಗ ಅರುಣ್ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಏಕಾಏಕಿ ತಾಳಿಕಟ್ಟಿದ್ದಾನೆ. ಇದನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ.

ಅಮೃತಾ ತುಮಕೂರಿನಲ್ಲಿ ಎಂಎ ಓದುತ್ತಿದ್ದರು. ಅರಣ್ ಸೀಗೆಹಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕುರಿಗಾಹಿಯಾಗಿದ್ದನು ಎಂದು ತಿಳಿದು ಬಂದಿದೆ.