Monday, January 20, 2025
ಸುದ್ದಿ

ದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿ- ಕಹಳೆ ನ್ಯೂಸ್

ದಾವಣಗೆರೆ: ಅಡುಗೆ ಗ್ಯಾಸ್ ಸಿಲಿಂಡರ್ ತರಿಸಿದಾಗ ಗ್ರಾಹಕರು ಸಾಮಾನ್ಯವಾಗಿ ಅದರ ತೂಕ ಹಾಕಿ ನೋಡುವುದಿಲ್ಲ. ಅದರ ಬಗ್ಗೆ ಅನುಮಾನ ಕೂಡ ಮೂಡುವುದಿಲ್ಲ. ಅದರಲ್ಲೂ ವಾಣಿಜ್ಯ ಸಂಬಂಧಿ ಉದ್ದೇಶಕ್ಕೆ ಲೋಡ್ ಗಟ್ಟಲೆ ಗ್ಯಾಸ್ ಸಿಲಿಂಡರ್ ತರಿಸುವವರು ಅದನ್ನು ಗಮನಿಸುವ ಗೋಜಿಗೂ ಹೋಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಗ್ಯಾಸ್ ಕದಿಯುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲು ಹೋಗುವಾಗ ಮಾರ್ಗ ಮಧ್ಯೆಯೇ ಗಾಡಿ ನಿಲ್ಲಿಸಿ ಗ್ಯಾಸ್ ಕದಿಯುವ ಸಂಗತಿ ಇದೀಗ ದಾವಣಗೆರೆ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ; ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

ಜಾಹೀರಾತು
ಜಾಹೀರಾತು
ಜಾಹೀರಾತು

ವಾಣಿಜ್ಯ ಉದ್ದೇಶಕ್ಕೆ, ಮದುವೆ ಸಮಾರಂಭಗಳಿಗೆ ನೀಡಲಾಗುವ ಗ್ಯಾಸ್ ಸಿಲಿಂಡರ್ ಗಳನ್ನು ಮಾರ್ಗಮಧ್ಯೆ, ಜನ ಹೆಚ್ಚಿಲ್ಲದ ಕಡೆ ನಿಲ್ಲಿಸಿ ಸಿಬ್ಬಂದಿಯೇ ಗ್ಯಾಸ್ ಕದಿಯುತ್ತಿದ್ದ ಸಂಗತಿ ತಿಳಿದುಬಂದಿದೆ. ಸಿಬ್ಬಂದಿ ಗ್ಯಾಸ್ ಕದಿಯುತ್ತಿರುವುದನ್ನು ಕಂಡ ಸಾರ್ವಜನಿಕರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇಂದು ನಗರದ ಹೊರ ವಲಯದಲ್ಲಿದ್ದ ತೋಟವೊಂದರಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಇಳಿಸಿ ಡಂಪಿಂಗ್ ಮಾಡುತ್ತಿದ್ದ ಸಿಬ್ಬಂದಿ ಕಂಡುಬಂದಿದ್ದಾರೆ. ತುಂಬಿದ ಸಿಲಿಂಡರ್ ನಿಂದ ಖಾಲಿ‌ ಸಿಲಿಂಡರ್ ಗೆ ಗ್ಯಾಸ್ ತುಂಬುತ್ತಿದ್ದ ಅವರನ್ನು ಕಂಡು ಅನುಮಾನಗೊಂಡ ಜನ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.