ಮೂಡುಬಿದಿರೆ :- ‘ಜೈನ ಸಾಹಿತ್ಯ ಕೇವಲ ಜೈನ ಧರ್ಮಕಷ್ಟೇ ಸೀಮಿತವಾಗಬಾರದು ಜೈನ ಧರ್ಮ ಸಮುದಾಯ ಮಾತ್ರವಲ್ಲ, ಅದು ವಿಶ್ವಕ್ಕೆ ಶ್ರೇಷ್ಠ ಮಾನವೀಯ ವಿಚಾರಗಳನ್ನು ಪರಿಣಾಮಕಾರಿ ಯಾಗಿ ತಲುಪಿಸಿದ ಧರ್ಮ .’ ಎಂ. ವಿ ಶೆಟ್ಟಿ ಯವರು ತಮ್ಮ ಬರಹದಲ್ಲಿ ಜೈನ ಧರ್ಮದ ಜೊತೆ ಜೊತೆಗೆ ಎಲ್ಲ ಸಮಾಜಕ್ಕೂ ಜೈನ ಧರ್ಮದ ಸಂದೇಶವನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಮೂಡುಬಿದಿರೆ ಯ ಜೈನ ಮಠದಲ್ಲಿ ನ. 10 ರಂದು ನಡೆದ ಹಿರಿಯ ಸಾಹಿತಿ ಎಂ .ವಿ ಶೆಟ್ಟಿ ಅಭಿನಂದನಾ ಕಾರ್ಯಕ್ರಮದಲ್ಲಿ ಜೈನ ಕಾಶಿ ಮೂಡುಬಿದಿರೆಯ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ಆಯೋಜಕರಾದ ಗಣೇಶ್ ಪ್ರಸಾದ್ ಜೀ ಹಾಗೂ ಶ್ವೇತಾ ನಿಹಾಲ್ ಜೈನ್ ಎಂ. ವಿ ಶೆಟ್ಟಿ ಯವರ ಬಗ್ಗೆ ಅಭಿಮಾನದ ನುಡಿಗಳನ್ನು ಆಡಿದರು.
ಹಿರಿಯ ಸಾಹಿತಿ ಎಂ. ವಿ ಶೆಟ್ಟಿ ಯವರು ಮಾತಾನಾಡಿ ಈ ಗೌರವಾಭಿನಂದನೆ ನನ್ನ ಸಾಹಿತಿಕ, ಸಾಮಾಜಿಕ ಜವಾಬ್ದಾರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು .
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಕವಿಗಳು ಮತ್ತು ಕವಿಯತ್ರಿಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ವೀಣಾ ರಘಚಂದ್ರ, ವಿನೋದ ಉಡುಪಿ, ನಿರ್ಮಲಾ ಕೃಷ್ಣರಾಜ್, ಸನತ್ ಕುಮಾರ್ ಜೈನ್, ಎಂ ರತ್ನ ಕುಮಾರ್, ಉಷಾ ಗಣೇಶ್ ಪ್ರಸಾದ್ ಜೀ, ಅಕ್ಷತಾ ಆದರ್ಶ, ಜ್ಞಾನ ಚಂದ್ರ ,ಪ್ರತಿಭಾ ಶಾಂತಿ ಪ್ರಕಾಶ್ ಮೊದಲಾದವರು ಉಪಸ್ಥಿತರಿದರು.