Tuesday, January 21, 2025
ಸುದ್ದಿ

ಕುಡಿದ ಮತ್ತಿನಲ್ಲಿ ಸ್ನೇಕ್ ಡ್ಯಾನ್ಸ್, ವಧುವಿಗೆ ಕಪಾಳಮೋಕ್ಷ ಮಾಡಿದ ವರ: ಮುರಿದು ಬಿತ್ತು ಮದುವೆ, ವಿಡಿಯೋ ವೈರಲ್!-ಕಹಳೆ ನ್ಯೂಸ್

ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್ ಮಾಡಿದ್ದು ಅಲ್ಲದೆ ವಧುವಿನ ಕಪಾಳಕ್ಕೆ ಹೊಡೆದಿದ್ದರಿಂದ ಮದುವೆ ಮುರಿದು ಬಿದ್ದಿದೆ. 

 ಭಾರತೀಯ ಮದುವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ ಕುಡಿದು ನಾಗಿನ್(ಸ್ನೇಕ್) ಡ್ಯಾನ್ಸ್ ಮಾಡಿದ್ದು ಅಲ್ಲದೆ ವಧುವಿನ ಕಪಾಳಕ್ಕೆ ಹೊಡೆದಿದ್ದರಿಂದ ಮದುವೆ ಮುರಿದು ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಪ್ರದೇಶದ ಲಕ್ಕೀಂಪುರದ ಖೀರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವರ ಕುಡಿದು ಅಸಭ್ಯವಾಗಿ ಡ್ಯಾನ್ಸ್ ಮಾಡಿದ್ದರಿಂದ ನೊಂದ ವಧು ಮದುವೆಯನ್ನೇ ರದ್ದು ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ವರ ಹಾಗೂ ಆತನ ಪೋಷಕರು ವಧುವಿನ ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರು ಸಾಧ್ಯವಾಗದೇ ಬರಿಗೈಲಿ ಹಿಂದಿರುಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಇನ್ನು ಎರಡು ಕುಟುಂಬದವರು ಮದುವೆಗೆ ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಿದ್ದು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ.