Monday, January 20, 2025
ಸುದ್ದಿ

ಅಯೋಧ್ಯೆಯಂತೆ, ದತ್ತಪೀಠ ವಿವಾದವನ್ನು ಕೋರ್ಟ್ ಬಗೆಹರಿಸಲಿ: ಚಿಕ್ಕಮಗಳೂರು ಜನರ ಒತ್ತಾಯ -ಕಹಳೆ ನ್ಯೂಸ್

ಚಿಕ್ಕಮಗಳೂರು: ಶತಮಾನಗಳ ಹಳೆಯ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್ ಬಗೆಹರಿಸಿದ ನಂತರ ಚಿಕ್ಕಮಗಳೂರಿನ ಜನತೆ ಮೂರು ದಶಕಗಳ ದತ್ತಪೀಠ ವಿವಾದವನ್ನು ಕೂಡ ಬಗೆಹರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸುತ್ತಿದ್ದಾರೆ.

ದತ್ತ ಪೀಠ ಚಳವಳಿಯನ್ನು ಆರಂಭಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಲು ಇರುವ ಎಲ್ಲಾ ಸಾಧ್ಯತೆಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2016-17ರಲ್ಲಿ ಸುಪ್ರೀಂ ಕೋರ್ಟ್ ಅಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೊಳ್ಳೆಯ ಅವಕಾಶ ನೀಡಿತ್ತು. ದತ್ತಪೀಠ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಹೆಚ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು, ಅದು ಸಲ್ಲಿಸಿದ ವರದಿಯನ್ನು ಹಿಂದೂ ಹಣ ತಿರಸ್ಕರಿಸಿತ್ತು. ಸರ್ಕಾರದ ಪೂರ್ವಾಗ್ರಹಪೀಡಿತದಿಂದ ವಿವಾದ ಬಗೆಹರಿಯಲಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.

ವಿವಾದವೇನು?: 1986ರವರೆಗೆ ಚಿಕ್ಕಮಗಳೂರಿನ ತಾಲ್ಲೂಕಿನ ಬಾಬಾ ಬುಡನ್ ಗಿರಿ ಬೆಟ್ಟದಲ್ಲಿರುವ ದತ್ತ ಗುಹೆ ದೇವಾಲಯ ಮತ್ತು ಬಾಬಾಬುಡನ್ ಸ್ವಾಮಿ ದರ್ಗಾ ಹಿಂದೂ ಮತ್ತು ಮುಸಲ್ಮಾನರಿಗೆ ಸಾಮರಸ್ಯದ ಧಾರ್ಮಿಕ ಕೇಂದ್ರವಾಗಿತ್ತು.

ದತ್ತಪೀಠದ ವ್ಯವಸ್ಥಾಪಕ ಸೈಯದ್ ಪೀರ್ ಮೊಹಮ್ಮದ್ ಶಾ ಖ್ವಾದ್ರಿ ಅವ್ಯವಹಾರ ನಡೆಸಿದ್ದಾರೆ ಎಂದು ಹಿಂದೂಗಳ ಪರ ಸಂಘಟನೆಗಳಾದ ವಿಎಚ್ ಪಿ, ಭಜರಂಗ ದಳ ಮತ್ತು ಗುರು ದತ್ತಾತ್ರೇಯ ಪೀಠ ಸಂವರ್ಧನ ಸಮಿತಿ ಪ್ರತಿಭಟನೆಯನ್ನು ಆರಂಭಿಸಿದವು.

ದತ್ತಪೀಠ ವಿವಾದದಿಂದಸಿ ಟಿ ರವಿ, ಸುನಿಲ್ ಕುಮಾರ್ ನಂತಹ ರಾಜಕೀಯ ನಾಯಕರು ಬೆಳೆದರು ಎನ್ನಬಹುದು.