Monday, January 20, 2025
ಸುದ್ದಿ

IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?-ಕಹಳೆ ನ್ಯೂಸ್

ಧೋನಿ ಟೀಂ 13ನೇ ಆವೃತ್ತಿಯಲ್ಲಿ ಹೊಸ ತಂಡ ರಚನೆ ಮಾಡುವ ಅಂದಾಜು ಮಾಡಿಕೊಂಡಂತಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ CSK ಪ್ರತಿಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಂ ಕೂಡ ಹೌದು. ಸದ್ಯ ಚೆನ್ನೈ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಗ್ಲಿಷ್ ಪತ್ರಿಕೆಯೊಂದು ಮಾಡಿರುವ ವರದಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

2018ರ ಐಪಿಎಲ್​ನಲ್ಲಿ ಗರಿಷ್ಠ ರನ್ ಕಲೆಹಾಕಿ ಮಿಂಚಿದ ಅಂಬಾಟಿ ರಾಯುಡುರನ್ನು ಚೆನ್ನೈ ರಿಲೀಸ್ ಮಾಡಲು ಮುಂದಾಗಿದೆಯಂತೆ. ಇವರ ಜೊತೆಗೆ ಕೇದರ್ ಜಾಧವ್ ಹಾಗೂ ಮುರಳಿ ವಿಜಯ್​ ಅವರನ್ನು ಕೂಡ ಚೆನ್ನೈ ಕೈಬಿಡುವ ತೀರ್ಮಾನ ಮಾಡಿದೆಯಂತೆ.

ಕಳೆದ ಸೀಸನ್​ನಲ್ಲಿ ಈ ಮೂವರು ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಅಂಬಟಿ ರಾಯುಡು ವಿಶ್ವಕಪ್​ ವೇಳೆ ಕ್ರಿಕೆಟ್​ನಿಂದ ನಿವೃತ್ತಿ ಪಡೆದು ಮತ್ತೆ ಹಿಂಪಡೆದಿದ್ದಾರೆ. ಸದ್ಯ ಇದುವೇ ರಾಯುಡುಗೆ ಮುಳುವಾಗಿದ್ದು, ಫಾರ್ಮ್​ಕೂಡ ಕಳೆದುಕೊಂಡಿದ್ದಾರೆ.

ಮುರಳಿ ವಿಜಯ್​ಗೆ ಕಳೆದ IPL ​ನಲ್ಲಿ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಇತ್ತ ಜಾಧವ್ ನಿಧಾನಗತಿಯ ಆಟವಾಡಿದ್ದರು. ಇದನ್ನೆಲ್ಲ ಮನಗಂಡು ಸಿಎಸ್​ಕೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಆದರೆ, ಚೆನ್ನೈ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ನವೆಂಬರ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಕೈಬಿಟ್ಟ ಹಾಗೂ ತನ್ನಲ್ಲೆ ಉಳಿಸಿಕೊಂಡ ಆಟಗಾರರ ಬಗ್ಗೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಿದೆ. ರಾಯುಡು, ವಿಜಯ್ ಹಾಗೂ ಜಾಧವ್ ಜೊತೆ ಶಾರ್ದೂಲ್ ಠಾಕೂರ್ ಮತ್ತು ಕರ್ಣ್​ ಶರ್ಮಾ ಹೆಸರು ಕೂಡ ಕೇಳಿಬರುತ್ತಿದೆ.

ಧೋನಿ ಟೀಂ 13ನೇ ಆವೃತ್ತಿಯಲ್ಲಿ ಹೊಸ ತಂಡ ರಚನೆ ಮಾಡುವ ಅಂದಾಜು ಮಾಡಿಕೊಂಡಂತಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.