Recent Posts

Monday, January 20, 2025
ಸುದ್ದಿ

ರಾಜ್ಯ ಮಟ್ಟದ ಕ್ರಿಡಾ ಕೂಟ ಜ್ಞಾನೋದಯ ಬೆಥನಿ ನೆಲ್ಯಾಡಿಯ ವಿದ್ಯಾರ್ಥಿ ಆದರ್ಶ್‍ಶೆಟ್ಟಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ-ಕಹಳೆ ನ್ಯೂಸ್

ನೆಲ್ಯಾಡಿ : ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ಮಂಡ್ಯ ಜಿಲ್ಲಯ ನಾಗಮಂಡಲ ತಾಲೂಕಿನ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನವಂಬರ್ 11,12,13 ಮತ್ತು 14 ತಾರೀಖುಗಳಲ್ಲಿ ಜರುಗಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರಿಡಾ ಕೂಟದಲ್ಲಿ, ಪ್ರಾಥಮಿಕ ಶಾಲಾ 14 ರ ವಯೋಮಿತಿಯ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಇವರು ಪ್ರಥಮ ಸ್ಥಾನ ಪಡೆದು ಡಿಸಂಬರ್ 4ರಿಂದ 10ರವರೆಗೆ ಪಂಜಾಬಿನಲ್ಲ್ಲಿ ನಡೆಯುವ 65ನೇಯ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ 17 ರ ವಯೋಮಾನದ ಬಾಲಕಿಯರ ವಿಭಾಗದ ಚಕ್ರ ಎಸೆತ ಸ್ಪರ್ಧೆಯಲ್ಲಿ ಇದೇ ಸಂಸ್ಥೆಯ ಮೇಘ ಮತ್ತಾಯಿ ಸಹ ಭಾಗವಹಿಸಿರುತ್ತಾರೆ. ಇವರಿಗೆ ಸಂಸ್ಥೆಯ sssಸಂಚಾಲಕರಾದ ರೆ| ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ, ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ, ಖಜಾಂಜಿ ರೆ|ಫಾ ಐಸಕ್ ಸಾಮ್ ಒಐಸಿ,ಯವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ. ದೈಹಿಕ ಶಿಕ್ಷಕರಾದ ಮನೋಜ್ , ಸುದರ್ಶನ್, ಮತ್ತು ಶ್ರೀಮತಿ ಅಲ್ಪೋನ್ಸಾರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು