Recent Posts

Monday, January 20, 2025
ಕ್ರೀಡೆ

ಪುತ್ತೂರು: ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು ಇದರ ಆಶ್ರಯದಲ್ಲಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟ-ಕಹಳೆ ನ್ಯೂಸ್

ಶ್ರೀ ರಾಮ್ ಪ್ರೆಂಡ್ಸ್(ರಿ) ಪಡ್ನೂರು, ಪುತ್ತೂರು ಇದರ ಆಶ್ರಯದಲ್ಲಿ ಹಿಂದೂ ಭಾಂಧವರಿಗಾಗಿ ಪುರುಷರ ವಿಭಾಗದ ಪ್ರೋ ಮಾದರಿಯ ಮುಕ್ತ ಕಬ್ಬಡ್ಡಿ ಪಂದ್ಯಾಟವು ನವೆಂಬರ್ 17ರಂದು ಪಡ್ನೂರು ಶಾಲಾ ವಠಾರದ ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ.


750ರೂ ಪ್ರವೇಶ ಶುಲ್ಕದ ಈ ಪಂದ್ಯದ ಪ್ರಥಮ ಬಹುಮಾನವಾಗಿ ರೂ.10,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.7,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ತೃತೀಯ ಬಹುಮಾನವಾಗಿ ರೂ.3,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ, ಚತುರ್ಥ ಬಹುಮಾನವಾಗಿ ರೂ.3,019ಹಾಗು ಅಟಲ್ ಬಿಹಾರಿ ವಾಜಪೇಯಿ ಟ್ರೋಫಿ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ ಗಂಟೆ 10ಕ್ಕೆ ಉದ್ಘಾಟನಾ ಸಮಾರಂಭ, ರಾತ್ರಿ ಗಂಟೆ 7ಕ್ಕೆ ಸಭಾ ಕಾರ್ಯಕ್ರಮ , ರಾತ್ರಿ ಗಂಟೆ 8ಕ್ಕೆ ಅನ್ನ ಸಂತರ್ಪಣೆ, 8.30ಕ್ಕೆ ವಿಶೇಷ ಸುಡುಮದ್ದು ಪ್ರದರ್ಶನ ನಂತರ ಲ.ಕಿಶೋರ್ ಡಿ ಶೆಟ್ಟಿ ಮಂಗಳೂರು ಇವರ ಲಲಿತೆ ಕಲಾವಿದರು ಇವರಿಂದ ಪುತ್ತೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ “ಕಟೀಲ್ದಪ್ಪೆ ಉಳ್ಳಾಲ್ತಿ” ಪೌರಾಣಿಕ ತುಳು ನಾಟಕ ಜರುಗಲಿದೆ.

ಇನ್ನೂ ಕಬಡ್ಡಿ ಪಂದ್ಯಾಟವು ಬೆಳಿಗ್ಗೆ 10ರಿಂದ ನಿಮ್ಮ ಕಹಳೆ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ