Monday, January 20, 2025
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ‘ಯುವಜನತೆ ಮತ್ತು ಭಾರತ’ ಉಪನ್ಯಾಸ ಕಾರ್ಯಕ್ರಮ-ಕಹಳೆ ನ್ಯೂಸ್

ವಿವೇಕಾನಂದರ ಸಂದೇಶದ ಆಧಾರದಿಂದ ಸಧೃಢ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ – ಆದರ್ಶ ಗೋಖಲೆ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಪ್ರಮುಖವಾಗಿದೆ  ಅವರು ದೇಶದ ಅಭಿವೃದ್ಧಿಗಾಗಿ ದುಡಿಯಬೇಕು

ಭವ್ಯ ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವಶಪಥವನ್ನು ಮಾಡಬೇಕು. ಯುವಸಮೂಹದ
ಚೇತನಾಶಕ್ತಿಯಾದ ಸ್ವಾಮಿ ವಿವೇಕಾನಂದರ ಸಂದೇಶದ ಆಧಾರದಿಂದ ಬಲಿಷ್ಠ ರಾಷ್ಟ್ರವನ್ನು ಕಟ್ಟಲು
ಪ್ರತಿಜ್ಞಾಬದ್ಧರಾಗಬೇಕು ಎಂದು ‘ಟೀಂ ಪ್ರೇರಣಾ’ದ ಸಂಚಾಲಕ ಆದರ್ಶ ಗೋಖಲೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎ.ಬಿ.ವಿ.ಪಿ) ಆಶ್ರಯದಲ್ಲಿ ನಡೆದ ‘ಯುವಜನತೆ ಮತ್ತು ಭಾರತ’ ಎಂಬ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ
ಭಾಗವಹಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕರು ದೇಶದ ಶಕ್ತಿ. ಅವರಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ತಾಯ್ನಾಡಿನ ಬಗ್ಗೆ ಧನ್ಯತಾ ಭಾವನೆ
ಬೆಳೆಯಬೇಕು. ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಶ್ರದ್ಧೆ,ಉತ್ಸಾಹ, ಘನತೆಗಳನ್ನು ಹೆಚ್ಚಿಸಲು ಕಾರಣವಾಗಬೇಕು. ಭಾರತದ
ಆತ್ಮವಾಗಿರುವ ಶಿಕ್ಷಣ ವ್ಯವಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿದಾಗ ಅವರಲ್ಲಿ ಸಮಾಜಮುಖಿ ಗುಣ ಬೆಳೆಯಲು ಸಾಧ್ಯ. ಆದರೆ ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಬದುಕಿದರೆ ದೇಶವು ಪ್ರಗತಿಯ ಮೆಟ್ಟಿಲನ್ನು ಏರಬಹುದು.

ಯುವಕರು ವಿವೇಕಾನಂದರ ತತ್ವಗಳನ್ನು ಪಾಲಿಸುತ್ತಾ,ಸಮಾಜಕ್ಕಾಗಿ ಬದುಕುವ, ದೇಶಕ್ಕಾಗಿ ದುಡಿಯುವ
ಮನೋಭಾವವನ್ನು ಬೆಳೆಸಿಕೊಂಡಾಗ ದೇಶದ ಚಿತ್ರಣವನ್ನುಬದಲಿಸಬಹುದು ಎಂದರು.ಬಳಿಕ ಬ್ರಿಟಿಷರ ರಾಕ್ಷಸೀ ಮನೋಭಾವವನ್ನು ಬೆಳಕಿಗೆ ತಂದ  ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 100 ವರ್ಷ ತುಂಬಿದುದರ
ಹಿನ್ನೆಲೆಯಲ್ಲಿ ಆ ಬಗ್ಗೆ ಸ್ಥೂಲ ಮಾಹಿತಿಗಳನ್ನು ನೀಡಿದರು.

 

ಪ್ರಾಂಶುಪಾಲ ಡಾ. ಎಂ. ಕೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿ ಪ್ರಜ್ಞಾ ಎಂ. ಆರ್ ಕಾರ್ಯಕ್ರಮವನ್ನು ನಿರೂಪಿಸಿರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ(ಎ.ಬಿ.ವಿ.ಪಿ) ಜತೆ ಕಾರ್ಯದರ್ಶಿ ಸಂಜನಾ ಕೆ.ಸ್ವಾಗತಿಸಿ ವಿದ್ಯಾರ್ಥಿ ಪ್ರಮುಖ್ ಶ್ರದ್ಧಾ ನಾಯಕ್ ವಂದಿಸಿದರು.