Monday, January 20, 2025
ಸುದ್ದಿ

ಯುವವಾಹಿನಿ ಮಾಣಿ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಆಚರಣೆ-ಕಹಳೆ ನ್ಯೂಸ್

ನವೆಂಬರ್ 14… ಈ ದಿನ ಪ್ರತಿಯೊಬ್ಬರ ಬದುಕಿನಲ್ಲೂ ಅಮೂಲ್ಯವಾಗಿದ್ದು. ಯಾಕೆಂದರೆ, ಇದು ಬರೀ ದಿನ ಅಲ್ಲ. ಇದು ನೆನಪಿನ ಮೆರವಣಿಗೆ… ಮಕ್ಕಳ ದಿನಾಚರಣೆ ಎಂದರೇನೇ ಹಾಗೆ… ಚಿಣ್ಣರಿಗಂತೂ ಇದು ಅಕ್ಷರಶಃ ಹಬ್ಬ. ದೊಡ್ಡವರಿಗೆ ಬಾಲ್ಯದ ದಿನಗಳನ್ನು ಮತ್ತೆ ಮೆಲುಕು ಹಾಕುವ ಕ್ಷಣ… ಇದೇ ಕಾರಣಕ್ಕೆ ಯುವವಾಹಿನಿ ಮಾಣಿ ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿ ಹಾಗೂ ಬಾಬಣಕಟ್ಟೆ ಆಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿಹಂಚಿ, ಪಠ್ಯ ಸಾಮಾಗ್ರಿ ನೀಡಿ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ, ಕಾರ್ಯದರ್ಶಿ ಶಿವರಾಜ್ ಪಿ.ಆರ್, ನಿ.ಪೂ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ಸಂಘಟನಾ ಕಾರ್ಯದರ್ಶಿ ರಾಜೇಶ್ ಬಾಬಣಕಟ್ಟೆ, ಕೋಶಾಧಿಕಾರಿ ವಿಶ್ವನಾಥ, ರವಿಚಂದ್ರ ಬಾಬಣಕಟ್ಟೆ,ರಾಜೇಶ್ ಕೋಟ್ಯಾನ್ ಪೆರಾಜೆ,ರಾಜೇಶ್ ಬಲ್ಯ ಬರಿಮಾರ್, ದಾಮೋದರ್,ನವೀನ ಪೂಂಜಾವು, ಜಗದೀಶ್ ಅನಂತಾಡಿ ಮತ್ತಿರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು