ಪುತ್ತೂರು: ಒಳ್ಳೆಯ ಫಲಿತಾಂಶಗಳನ್ನು ಪಡೆಯಬೇಕಾದರೆಅತ್ಯುತ್ತಮ ಗುರಿ, ಪ್ರಯತ್ನ, ವಿಚಾರಧಾರೆಗಳನ್ನು
ಅಳವಡಿಸಿಕೊಳ್ಳಬೇಕು.
ಆಗ ಮಾತ್ರ ಯಶಸ್ಸಿನ ತುತ್ತ ತುದಿಗೇರಲುಸಾಧ್ಯ, ವಿದ್ಯಾರ್ಥಿಗಳು ಸದಾ ಕಾಲ ತಮ್ಮ ಜೀವನದಲ್ಲಿ ತಮ್ಮ ಬದುಕನ್ನು
ರೂಪಿಸಿಕೊಟ್ಟ ಶಿಕ್ಷಕರನ್ನು ಸ್ಮರಿಸಕೊಳ್ಳಬೇಕು. ಇಂದಿನ ದಿನಗಳಲ್ಲಿ ಶಿಕ್ಷಣಹಾಗೂ ವಿದ್ಯಾರ್ಥಿಗಳ ಗುಣನಡತೆಗಳ ಗುಣಮಟ್ಟದಲ್ಲಿ ಕುಸಿತ ಉಂಟಾಗುತ್ತಿದೆ.
ಇದಕ್ಕೆ ಕೇವಲ ವಿದ್ಯಾರ್ಥಿಗಳು ಮಾತ್ರ ಕಾರಣವಲ್ಲ. ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವ
ಹೆತ್ತವರು, ಮನೆ, ಸಮಾಜದ ಪಾತ್ರವೂ ಪ್ರಮುಖವಾದದ್ದು.
ಆದ್ದರಿಂದ ಮಕ್ಕಳನ್ನು ತಿದ್ದಿ ತೀಡುವ ಕಾರ್ಯ ಬಾಲ್ಯದಿಂದಲೇ ಹೆತ್ತವರಿಂದ ಹಾಗೂ ಗುರುಗಳಿಂದ ನಡೆಯಬೇಕು. ವಿದ್ಯಾರ್ಥಿಗಳು ತಮ್ಮೆದುರು ಬರುವ ಕಷ್ಟ-ನಷ್ಟ-ಸಮಸ್ಯೆಗಳಿಗೆ ಎದೆಗುಂದಬಾರದು ಎದುರಿಸಿ ಗೆದ್ದು ನಿಲ್ಲಬೇಕು ಎಂದು ಪ್ರಗತಿ ಎಜ್ಯುಕೇಶನ್ ಟ್ರಸ್ಟ್‍ನ ಸಂಚಾಲಕರೂ, ಸ್ಥಾಪಕಾಧ್ಯಕ್ಷರು ಆದ ಪಿ.ವಿ. ಗೋಕುಲ್‍ನಾಥ್ ವಿದ್ಯಾರ್ಥಿಗಳಿಗೆ
ಹಿತನುಡಿಗಳನ್ನಾಡಿದರು.
ಪ್ರಗತಿ ಸ್ಟಡಿ ಸೆಂಟರ್‍ನ ಮುಖ್ಯ ಶಾಖೆ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಾಗೂ ಪೋಳ್ಯದಲ್ಲಿರುವ ಪ್ರಗತಿ ರೆಸಿಡೆನ್ಸಿಯಲ್ ಸ್ಟಡಿ ಸೆಂಟರ್‍ನಲ್ಲಿ ನಡೆದ “ಮಕ್ಕಳ ದಿನಾಚರಣೆ”ಯ
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ದೀಪ ಪ್ರಜ್ವಲನೆಗೊಳಿಸಿ
ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಉಪನ್ಯಾಸಕರು ಕಾರ್ಯಕ್ರಮವನ್ನು ಸಂಯೋಜಿಸಿದರು. ತದನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು, ಹಾಗೂ ವಿಜೇತರಿಗೆ ಬಹುಮಾನ
ವಿತರಿಸಿ, ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.