Sunday, November 24, 2024
ಸುದ್ದಿ

ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಹಾವಳಿ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಹಾವಳಿ ಶುರುವಾಗಿದೆ. ಈಗಾಗಲೇ 10 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಮೂರು ತಿಂಗಳುಗಳಲ್ಲಿ ಡೆಂಗ್ಯೂ ಪ್ರಕರಣಗಳು ದುಪ್ಪಟ್ಟಾಗಿದ್ದು, ಬರೋಬ್ಬರಿ ಹತ್ತು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಜನವರಿಯಿದ ಆಗಸ್ಟ್‌ವರೆಗೆ ಬೆಂಗಳೂರು ನಗರದಲ್ಲಿ 3,822 ಪ್ರಕರಣ ಹಾಗೂ ಇತರೆ ಜಿಲ್ಲೆಗಳಲ್ಲಿ 2,350 ಪ್ರಕರಣಗಳು ಸೇರಿ ಒಟ್ಟು 6172 ಮಂದಿಗೆ ಡೆಂಗ್ಯೂ ಜ್ವರ ವರದಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ನವೆಂಬರ್ 13ರ ಆರೋಗ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ಜಿಲ್ಲಾವಾರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,425 ಪ್ರಕರಣ ವರದಿಯಾಗಿದ್ದು, 4 ಮಂದಿಗೆ ಡೆಂಗ್ಯೂಗೆ ಬಲಿಯಾಗಿದ್ದಾರೆ. ಉಳಿದಂತೆ ಬೆಂಗಳೂರು 2, ರಾಮನಗರ, ಕೋಲಾರ, ಚಿತ್ರದುರ್ಗ, ವಿಜಯಪುರ, ಗದಗ, ಕೋಲಾರ, ಚಿತ್ರದುರ್ಗ, ವಿಜಯಪುರ, ಮಂಡ್ಯ, ಶಿವಮೊಗ್ಗದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ನವೆಂಬರ್ 13ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 8,438 ಪ್ರಕರಣಗಳು ಬೆಳಕಿಗೆ ಬಂದಿದೆ

. ಈ ಸಮಯದಲ್ಲಿ ಅವರ ದೇಹದ ಉಷ್ಣತೆ 103 ರಿಂದ105 ಡಿಗ್ರಿವರೆಗೆ ಏರುತ್ತದೆ. ಇದರ ಜೊತೆಗೆ ತೀವ್ರ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಪಾಯಕಾರಿ ಹಂತವಲ್ಲ. ಈ ತೀವ್ರ ಜ್ವರ 2 ರಿಂದ 3 ದಿನದೊಳಗೆ ಕಡಿಮೆಯಾಗುತ್ತದೆ. ಈ ಜ್ವರ ಕಡಿಮೆಯಾಗುವ ಅವಧಿ ಅತ್ಯಂತ ನಿರ್ಣಾಯಕವಾದದ್ದು. ಈ ಸಮಯದಲ್ಲಿ ದೇಹದಲ್ಲಿ ಕೆಂಪು ಕಲೆಗಳು ಮೂಡುತ್ತವೆ.