ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಿಂದಲ್ಲೂ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮೇಲೆ ಕಣ್ಣು ಇಟ್ಟಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಈ ಉಪಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವರು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅಥಣಿ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದ್ದು, ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯನ್ನು ಅಥಣಿಯಿಂದ ಕಣಕ್ಕಿಳಿಸಲು ನಿರ್ಧರಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕ್ಷೇತ್ರದ ತುಂಬೆಲ್ಲಾ ಕೇಳಿ ಬರುತ್ತಿದೆ.
ಇನ್ನೊಂದೆಡೆ ರಾಜು ಕಾಗೆ ಆಪ್ತರು ಹೇಳುವ ಪ್ರಕಾರ ರಾಜು ಕಾಗೆ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವ ಎಲ್ಲ ತಯಾರಿ ನಡೆಯುತ್ತಿದೆ. ಆದರೆ, ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಉತ್ತಮ ನಾಯಕರಿಲ್ಲ ಹೀಗಾಗಿ ರಾಜು ಕಾಗೆ ಅವರಿಗೆ ಅಥಣಿ ಟಿಕೇಟ್ ನೀಡಲು ಹೈಕಮಾಂಡ ನಿರ್ಧಾರ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಎನ್ನುವ ಮಾತುಗಳು ಕಾಗವಾಡ ಕ್ಷೇತ್ರದ ತುಂಬೆಲ್ಲಾ ಕಾಗೆ ಕಾರ್ಯಕರ್ತರು ಮಾತನಾಡಿಕೊಳ್ಳುವಂತಹದ್ದು.
ಒಂದು ವೇಳೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ. ರಾಜು ಕಾಗೆ ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ಒಂದು ವೇಳೆ ಪ್ರಕಾಶ ಹುಕ್ಕೇರಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡದೆ ಇದ್ದರೆ. ರಾಜು ಕಾಗೆ ಕಾಗವಾಡದಿಂದ ಸ್ಪರ್ಧೆ ಮಾಡಬಹುದು ಎನ್ನುವ ಮಾತುಗಳು ಕ್ಷೇತ್ರದ ತುಂಬಾ ಕೇಳಿ ಬರುವಂತಹದ್ದು.