Recent Posts

Monday, January 20, 2025
ಕ್ರೀಡೆ

ರಾಜಸ್ತಾನ ರಾಯಲ್ಸ್ ಗೆ ಬೇಕಂತೆ ಕೊಹ್ಲಿ, ಎಬಿಡಿ: ಇದಕ್ಕೆ RCB ಹೇಳಿದ್ದೇನು.?-ಕಹಳೆ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ತಂಡಗಳ ನಡುವೆ ಆಟಗಾರರ ವಹಿವಾಟು ಶುರುವಾಗಿದೆ. ಎಲ್ಲಾ ಫ್ರಾಂಚೈಸಿಗಳು ಅತ್ಯುತ್ತಮ ಆಟಗಾರರನ್ನು ಸೆಳೆದುಕೊಳ್ಳುವ ಮೂಲಕ ತಮ್ಮ ತಮ್ಮ ತಂಡವನ್ನು ಬಲಪಡಿಸುವ ಕಸರತ್ತಿನಲ್ಲಿ ತೊಡಗಿವೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಿಂಗ್ಸ್ ಇಲವೆನ್ ಪಂಜಾಬ್ ಬಿಟ್ಟು ದೆಹಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ.

ಟ್ರೆಂಟ್ ಬೋಲ್ಟ್ ದೆಹಲಿ ಟೀಮ್ ಬಿಟ್ಟು ಮುಂಬೈ ಇಂಡಿಯನ್ಸ್ ಬಳಗ ಸೇರಿದ್ದಾರೆ. ರಾಜಸ್ತಾನ ರಾಯಲ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಲ್ಲಿ ಅತಿ ಹೆಚ್ಚು ಬದಲಾವಣೆಗಳಾಗಿವೆ. ಈ ಮಧ್ಯೆ ಆರ್ ಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಟ್ವಿಟ್ಟರ್ ನಲ್ಲಿ ತಮಾಷೆಯ ಕಿತ್ತಾಟವೊಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಭಿಮಾನಿಯೊಬ್ಬ ಸಂಜು ಸ್ಯಾಮ್ಸನ್ ರನ್ನು ಆರ್ ಸಿ ಬಿಗೆ ಕೊಡ್ತೀರಾ ಅಂತಾ ರಾಜಸ್ತಾನ್ ರಾಯಲ್ಸ್ ತಂಡವನ್ನು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಆರ್ ಆರ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರನ್ನು ಕೊಟ್ಟು ಬದಲಾಗಿ ಸಂಜು ಸ್ಯಾಮ್ಸನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಿ ಅಂತಾ ತಮಾಷೆ ಮಾಡಿದೆ. ಇದನ್ನು ಆರ್ ಸಿ ಬಿ ಟ್ವಿಟ್ಟರ್ ಖಾತೆಗೂ ಟ್ಯಾಗ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು