Recent Posts

Monday, January 20, 2025
ಸಿನಿಮಾ

ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ವೈರಲ್- ಕಹಳೆ ನ್ಯೂಸ್

ಈಗಾಗಲೇ ತೆಲುಗು ಸಿನೆಮಾ ಸರಿಲೇರು ನೀಕೆವ್ವರುವಿನ ಶೂಟಿಂಗ್ ನಲ್ಲಿ ಬಿಝಿಯಾಗಿರುವ ನಟಿ ರಶ್ಮಿಕಾ ಮಂದಣ್ಣರವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.ಮಹೇಶ್ ಬಾಬು ಜೊತೆಯಾಗಿ ನಟಿಸುತ್ತಿರುವ ತೆಲುಗು ಸಿನೆಮಾ ಸರಿಲೇರು ನೀಕೆವ್ವರುವಿನಲ್ಲಿ ನಾಯಕಿಯಾಗಿ ಅಭಿನಯಿಸಲಿರುವ ರಶ್ಮಿಕಾ ಸಖತ್ ವರ್ಕೌಟ್ ಮಾಡುತ್ತಿದ್ದಾರೆ.

ತಮ್ಮ ಇನ್ ಸ್ಟಾದಲ್ಲಿ ತಾನು ವರ್ಕೌಟ್ ಮಾಡುವ ವಿಡಿಯೋ ಮತ್ತು ಫೋಟೋವನ್ನು ರಶ್ಮಿಕಾ ಅಪ್ಲೋಟ್ ಮಾಡಿದ್ದು ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ತೆಲುಗುವಿನ 2 ಸಿನೆಮಾಗಳಲ್ಲಿ ಬಿಝಿಯಾಗಿರುವ ರಶ್ಮಿಕಾ ನಟ ನಿತಿನ್ ಜೊತೆ ಭೀಷ್ಮ ಹಾಗೂ ನಟ ಅಲ್ಲು ಅರ್ಜುನ್ ಜೊತೆ ಎಎ20 ಸಿನೆಮಾದಲ್ಲಿ ನಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಶ್ಮಿಕಾನ ಸ್ಟಂಟ್‌ ವಿಡಿಯೋಗಳಲ್ಲಿ ಫಿಟ್ ನೆಸ್ ಗಾಗಿ ಎನರ್ಜಿ ಹಾಕುತ್ತಿರುವುದು ಕಂಡುಬಂದಿದ್ದು, ಹೊಸ 2 ಸಿನೆಮಾಗಳಲ್ಲಿ ಒಂದು ಸಿನೆಮಾಕ್ಕಾಗಿ ತಯಾರಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ರಶ್ಮಿಕಾ ಆಕ್ಷನ್ ಪಾತ್ರ ನಿರ್ವಹಿಸ ಬಹುದು ಎಂಬ ಕುತೂಹಲ ಮೂಡಿದೆ.