ಟಿಕ್ ಟಾಕ್ನಲ್ಲಿ ಕಲರ್ಫುಲ್ ವಿಡಿಯೋ ಹಾಕುತ್ತಿದ್ದ ಚಾಲಾಕಿ ಲೇಡಿಗೆ ಮನಸೋತ ಈತ.ಪ್ರೀತಿ, ಪ್ರೇಮವೆಲ್ಲವೂ ಮುಗಿಯಿತು..ಮುಂದೇನಾಯ್ತು?- – ಕಹಳೆ ನ್ಯೂಸ್
ಬೆಂಗಳೂರು: ಟಿಕ್ಟಾಕ್ ಆಯಪ್ನಿಂದ ಅದೆಷ್ಟೋ ಎಡವಟ್ಟುಗಳಾಗಿವೆ. ಹಲವರು ತಮ್ಮ ಪ್ರತಿಭೆ ತೋರಲು ಟಿಕ್ಟಾಕ್ ತುಂಬ ಒಳ್ಳೆಯ ವೇದಿಕೆ ಎಂದೇ ಭಾವಿಸಿ ಸದಾ ಅದರಲ್ಲೇ ಮುಳುಗಿರುತ್ತಾರೆ. ಹೀಗೆ ಟಿಕ್ ಟಾಕ್ ಗೀಳಿಗೆ ಅಂಟಿಕೊಂಡವರು ಓದಲೇಬೇಕಾದ ಸ್ಟೋರಿ ಇದು..
ಟಿಕ್ಟಾಕ್ ಬಳಕೆದಾರರಾದ ಶಿವಕುಮಾರ್ ಎಂಬುವರು ಪೇಚಿಗೆ ಸಿಕ್ಕಿದ ಸುದ್ದಿ ಇದು. ಶಿವಕುಮಾರ್ಗೆ ಟಿಕ್ಟಾಕ್ನಲ್ಲಿ ವಿಜಯಲಕ್ಷ್ಮೀ ಎಂಬುವರ ಪರಿಚಯ ಆಗಿತ್ತು. ಆಕೆ ಕಲರ್ ಕಲರ್ ವಿಡಿಯೋ ಹಾಕುತ್ತಿದ್ದರು. ಅದನ್ನು ನೋಡಿ ಶಿವಕುಮಾರ್ ಮನಸೋತಿದ್ದರು. ಅಲ್ಲದೆ ಫೇಸ್ಬುಕ್ನಲ್ಲಿ ಕೂಡ ಇಬ್ಬರೂ ಫ್ರೆಂಡ್ಸ್ ಆಗಿದ್ದರು.
ಹೀಗೆ ಅವರ ಸ್ನೇಹ ಪ್ರೀತಿ, ಪ್ರೇಮದಾಚೆಯೂ ಬೆಳೆದಿತ್ತು. ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಶಿವಕುಮಾರ್ ಅವರನ್ನು ನಂಬಿಸಿದ ವಿಜಯಲಕ್ಷ್ಮೀ ಆತನಿಂದ ಲಕ್ಷಲಕ್ಷ ಹಣ ಬಾಚಿದ್ದಳು. ಹೀಗೆ ಪದೇಪದೆ ಹಣ ಕೇಳಲು ಶುರು ಮಾಡಿದಾಗ ನಾವಿನ್ನು ಮದುವೆಯಾಗೋಣ ಎಂದು ಶಿವಕುಮಾರ್ ಹೇಳಿದ್ದ. ಆದರೆ ಅದಕ್ಕೆ ನಿರಾಕರಿಸಿದ ವಿಜಯಲಕ್ಷ್ಮೀ ಶಿವಕುಮಾರ್ ಸಹವಾಸವನ್ನೇ ಬಿಟ್ಟಿದ್ದಳು.
ಆದರೆ ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದಳು. ಸ್ನೇಹಿತ ಮಧು ಎಂಬಾತನ ಮೂಲಕ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಹೆದರಿಸಿದ್ದಳು. ಇದರಿಂದ ಬೇಸತ್ತ ಶಿವಕುಮಾರ್ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.