Saturday, November 23, 2024
ಸುದ್ದಿ

ಮಕ್ಕಳ ದಿನಾಚರಣೆ -2019: ಉದ್ಘಾಟನಾ ಸಮಾರಂಭ ಹಾಗೂ ಮನರಂಜನೆ ಕಾರ್ಯಕ್ರಮ ದಲ್ಲಿ ಕುಣಿದು ಕುಪ್ಪಳಿಸಿದ ಮಕ್ಕಳು -ಕಹಳೆ ನ್ಯೂಸ್

ಮಂಗಳೂರು :- ಪಾಂಡೇಶ್ವರ ಸುಭಾಷ್ ನಗರದ ವೀನಸ್ ಅಪಾರ್ಟ್ ಮೆಂಟ್ ನಲ್ಲಿ ಶ್ರೀಮತಿ ಅಕ್ಷತಾ ಮನೋಹರ್ ಅವರ ಸಂಯೋಜನೆ ಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ -2019 ಕಾರ್ಯಕ್ರಮ ಅದ್ದೂರಿ ಯಾಗಿ ಜರಗಿತು.
ಡ್ರಾಮಾ ಜ್ಯೂನಿಯರ್ ಸೀಸನ್ -1 ರಿಯಾಲಿಟಿ ಶೋ ವಿಜೇತೆ ,ಬಾಲ ನಟಿ ಚಿತ್ರಾಲಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಎಲ್ಲ ಮಕ್ಕಳಿಗೂ ಅವರದೇ ಆದ ವಿಚಾರ ಪ್ರತಿಭೆ ಇರುತ್ತದೆ ಅದನ್ನು ಎಲ್ಲ ಮಕ್ಕಳ ಹೆತ್ತವರು ಗುರುತಿಸಿ ಪ್ರೋತ್ಸಾಹ ನೀಡಬೇಕು ಅವಾಗ ನಿಮ್ಮ ಮಕ್ಕಳು ಉತ್ತಮ ಸಾಧಕರು ಆಗಬಹುದು .

ಅಂದರೆ ಬೇರ ಮಕ್ಕಳ ಪ್ರತಿಭೆ ಯ ಜೊತೆಗೆ ನಿಮ್ಮ ಮಕ್ಕಳನ್ನು ಹೋಲಿಸಿ ಬೇಡಿ ಎಂದು ಎಲ್ಲ ಹೆತ್ತವರಿಗೂ ಕಿವಿಮಾತು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಅಂಬೆಗಾಲಿಡುವ ಮಗು ನಡೆಯಲು ಪ್ರಯತ್ನಿಸಿದಾಗ ಎಡವಿ ಬೀಳುವುದು ಸಹಜ. ಅಂದರೆ ನಾವು ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕದೆ ಮಕ್ಕಳ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ನೀಡಬೇಕು ಕೇವಲ ಅಂಕ ತೆಗೆಯುವಯಂತ್ರವಾಗಿ ಮಾಡಬಾರದು ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂಬುದನ್ನು ನಾವು ಕಲಿಸಬೇಕೆಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳಾಲದ ಕೆ. ಪಾಂಡ್ಯರಾಜ ಬಲ್ಲಾಳ್ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್, ಶ್ರೀಮತಿ ಅಕ್ಷತಾ ಮನೋಹರ್, ಸತೀಶ್ ಮೊದಲಾದವರು ಉಪಸ್ಥಿತರಿದರು. ಛೋಟ ರಿಪೋರ್ಟ್ ರ್ ಖ್ಯಾತಿಯ ಬಾಲನಟಿ ಶ್ರೇಯಾ ದಾಸ್ ನಿರೂಪಿಸಿದರು.