ವಿಶ್ವ ಹಿಂದೂ ಪರಿಷತ್ ಪುತ್ತೂರು, ಬಜರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ಸಾಮೂಹಿಕ, ಸಾಮರಸ್ಯದ ಪ್ರತೀಕ ಭಕ್ತಿಪಂಥದ ಉದ್ಧಾರ ಪಥದ ದಾರ್ಶನಿಕ ಶ್ರೀ ಕನಕದಾಸರ ಜಯಂತಿ ಉತ್ಸವ ಕಾರ್ಯಕ್ರಮವು ನಿನ್ನೆ ಟೌನ್ ಬ್ಯಾಂಕ್ ಸಭಾಂಗಣ, ಪುತ್ತೂರು ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯಧ್ಯಕ್ಷರು ಪ್ರೋ. ಎಂ ಬಿ. ಪುರಾಣಿಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಿಂದೂ ಯುವ ಮುಂದಾಳು ಶ್ರೀ ಹರಿ ಪ್ರಸಾದ್ ಯಾದವ್ ಬಾಗಿಯಾಗಿದ್ದರು.
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಶ್ರೀ ಕನಕದಾಸರು ಜೀವ -ತತ್ವ -ಕೃತಿ ವಿಷಯದ ಬಗ್ಗೆ ಉಪನ್ಯಾಸ ಮಾಡಿದರು.
ಇನ್ನೂ ಕಾರ್ಯಕ್ರಮದಲ್ಲಿ ಯು. ಪೂವಪ್ಪ, ಮುರಳಿಕೃಷ್ಣ ಹಸಂತಡಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.