Sunday, November 24, 2024
ಸುದ್ದಿ

ಮಂಗಳೂರು: ದುಬೈನಲ್ಲಿ ಹೋಟೆಲ್ ವ್ಯವಹಾರದಲ್ಲಿ ವಂಚನೆ- ಆರೋಪಿಗಳ ಶೋಧ-ಕಹಳೆ ನ್ಯೂಸ್

ಮಂಗಳೂರು: ಮುಂಬೈ ಪೊಲೀಸರು 9 ವರ್ಷಗಳ ಹಿಂದೆ ದುಬೈನ ಹೋಟೆಲ್ ವ್ಯಾಪಾರವೊಂದರಲ್ಲಿ ವಂಚನೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳ ಪತ್ತೆಗೆ ಮಂಗಳೂರಿಗೆ ಆಗಮಿಸಿ ಪೊಲೀಸ್ ಆಯುಕ್ತರಿಗೆ ದೂರಿನ ಪ್ರತಿ ನೀಡಿದ್ದಾರೆ.

ಪ್ರಕರಣದ ಆರೋಪಿಗಳಾದ ಇಲ್ಲಿನ ಶಕ್ತಿನಗರದ ನಿವಾಸಿ ಸೂರಜ್ ಬಾಬುಗೊಡ್ಡ ಕೋಟ್ಯಾನ್(42) , ಮೂಡಬಿದ್ರೆ ಪುತ್ತಿಗೆ ಗ್ರಾಮದ ನಿವಾಸಿ ಅಜಯ್ ಬಾಬುಗೊಡ್ಡ ಕೋಟ್ಯಾನ್ (41), ಮಂಗಳೂರಿನ ಕೊಡಿಯಾಲ್ ಬೈಲ್ ನಿವಾಸಿಗಳಾದ ಕೆ. ಚಂದ್ರಶೇಖರ್‍ ಉಪಾಧ್ಯ ಮತ್ತು ಕೆ. ಕೃಷ್ಣ ಕಾಂತ್ ಉಪಾಧ್ಯ ವಂಚನೆ ಮಾಡಿದ್ದಾರೆಂದು ಮುಂಬೈನ ಶೇಖ್ ಅಜೀಜ್ ಶೇಖ್ ಜುಮಾನ್ ಅವರು ದೂರು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

2010ರಲ್ಲಿ ದುಬಾಯಿಯಲ್ಲಿ ಶೇಖ್ ಅಜೀಜ್ ಪುತ್ರಿ ಮತ್ತು ಈ ನಾಲ್ವರು ಆರೋಪಿಗಳು ಪಾಲುದಾರಿಕೆಯಲ್ಲಿ ಭಾರತೀಯ ಖಾದ್ಯಗಳ ಹೊಟೇಲ್ ಒಂದನ್ನು ತೆರೆದಿದ್ದರು. ಈ ಹೊಟೇಲ್ ಗೆ ಶೇಖ್ ಅಜೀಜ್ ಅವರ ಪುತ್ತಿಯ ಪರವಾಗಿ ಅವರೇ ಹೂಡಿಕೆ ಮಾಡಿದ್ದರು. ಆದರೆ ವ್ಯವಹಾರ ಚೆನ್ನಾಗಿ ನಡೆಯದ ಕಾರಣ ಸುಮಾರು ನಾಲ್ಕು ತಿಂಗಳ ನಂತರ ಹೊಟೇಲ್ ಮುಚ್ಚಲಾಗಿತ್ತು. ಆರೋಪಿಗಳು ಈ ಸಂದರ್ಭದಲ್ಲಿ 56,37,450 ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗಪುರದ ಸಿಜೆಎಂ ನ್ಯಾಯಾಲಯದಲ್ಲಿ ಈ ವಂಚನೆ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಾರಂಟ್ ಹೊರಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮುಂಬೈ ಪೊಲೀಸರು ಮಂಗಳೂರಿಗೆ ಬಂದಿದ್ದು ಆರೋಪಿಗಳ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ತಲೆ ಮೆರಸಿಕೊಂಡಿದ್ದು ತಮ್ಮ ಹೆಸರು ಮತ್ತು ವಿಳಾಸವನ್ನು ಬದಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.