ಉತ್ತರ ಪ್ರದೇಶ: ಹಿರಿಯ ಕೃಷಿ ಅಧಿಕಾರಿಯೊಬ್ಬರು ರೈತನ ತರಕಾರಿ ಮೇಲೆ ಕಾರು ಚಲಾಯಿಸಿ ತರಕಾರಿ ನಾಶ ಮಾಡಿದ ಘಟನೆ ಹಾಪುರ್ ಜಿಲ್ಲೆಯ ಕೃಷಿ ಮಾರುಕಟ್ಟೆಯಲ್ಲಿ ನಡೆದಿದೆ.
ರೈತ ಕೃಷಿ ಮಾರುಕಟ್ಟೆ ಅಧಿಕಾರಿಯ ಅನುಮತಿ ಪಡೆಯದೆ ತರಕಾರಿಯನ್ನು ಮಾರಾಟ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಮಾರುಕಟ್ಟೆ ಕಾರ್ಯದರ್ಶಿ ಸುಶೀಲ್ ಕುಮಾರ್ ಕಾರು ಚಲಾಯಿಸಿ ತರಕಾರಿಯನ್ನು ನಾಶ ಮಾಡಿರುವುದಾಗಿ ವರದಿಯಾಗಿದೆ.
ತರಕಾರಿ ನಾಶ ಮಾಡಿದ ಘಟನೆಯ ವಿಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.