ಕಳೆದ 15 ವರ್ಷಗಳಿಂದ ಚಾಮರಾಜನರ ಜಿಲ್ಲೆಯ ವೀರನಪುರ, ಹರವೆ, ಹೆಗ್ಗವಾಡಿಯ ರಸ್ತೆ ಹಾಳಾಗಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಸುಮಾರು 22 ಕಿಲೋಮೀಟರ್ ಉದ್ದವಿರುವ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ.
15 ವರ್ಷಗಳಿಂದಲೂ ಗುಂಡಿಯಿಂದ ಹದಗೆಟ್ಟಿರುವ ಈ ರಸ್ತೆಯಲ್ಲಿ ಪ್ರತಿ ನಿತ್ಯ ಓಡಾಡುವ ಗ್ರಾಮಸ್ಥರು ಬೇಸತ್ತು ಹೋಗಿದ್ದರು. ಎಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ ಆದರೆ ಇದೀಗ ಒಂದೇ ಒಂದು ಇ ಮೇಲ್ ನಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಮಲೆಯೂರು, ಕೆರೆಹಳ್ಳಿ ಮೂಲಕ ಹಾದು ಹೋಗುವ ಈ ರಸ್ತೆಯ ಫೋಟೋಗಳ ಜೊತೆಗೆ ರಸ್ತೆ ಹದಗೆಟ್ಟಿರುವ ಬಗ್ಗೆ
ಮಲೆಯೂರು ಗ್ರಾಮಸ್ಥ ಗಿರೀಶ್, ಸಿಎಂ ಕಚೇರಿಗೆ ಇ ಮೇಲ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿ, ಸಿಎಂ ಕಚೇರಿಯಿಂದ ಲೋಕೋಪಯೋಗಿ ಇಲಾಖೆಗೆ ಕೂಡಲೇ ಸರಿಪಡಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಸಿಎಂ ಯಡಿಯೂರಪ್ಪ ಸರ್ಕಾರ ಇ ಮೇಲ್ ಗೆ ಸ್ಪಂದಿಸಿರುವುದು ರಸ್ತೆ ಸರಿಯಾಗುವ ಭರವಸೆ ಸಿಕ್ಕಂತಾಗಿದೆ.