ಹೊಸದಿಲ್ಲಿ: ಅಯೋಧ್ಯೆ ಪ್ರಕರಣದ ತೀರ್ಪಿಗೆ ಸಂಬಂಧಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜಮೀಯತ್ ಉಲಮಾ ಹಿಂದ್ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜೊತೆಗಿನ ಮಾತುಕತೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಮೀಯತ್ ಉಲಮಾ ಹಿಂದ್ ನ ಮೌಲಾನ ಅರ್ಷದ್ ಮದನಿ, “ನಮ್ಮ ಮರುಪರಿಶೀಲನಾ ಅರ್ಜಿ ತಿರಸ್ಕೃತಗೊಳ್ಳಲಿದೆ ಎಂದು 100 ಶೇ. ಗೊತ್ತಿದ್ದರೂ, ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ. ಇದು ನಮ್ಮ ಹಕ್ಕು” ಎಂದರು.