ಮೈಸೂರು: ಪಕ್ಷಾಂತರಿಗಳನ್ನು ಈ ಬಾರಿಯ ಉಪಚುನಾವಣೆಯಲ್ಲಿ ಸೋಲಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಇಲ್ಲಿನ ರೈಲು ನಿಲ್ದಾಣದ ಮುಂಭಾಗ ಭಾನುವಾರ ವಿನೂತನ ಪ್ರತಿಭಟನೆ ನಡೆಸಿದರು
.
ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವ ಹಾಳಾಗಿದೆ. ಇದೊಂದು ರೀತಿಯಲ್ಲಿ ದರೋಡೆ. ಇವರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮರುಪರುಶೀಲನೆ ಅರ್ಜಿ ಹಾಕಬೇಕು. ಇಂತಹ ರಾಜಕಾರಣಿಗಳು ಸಂಸದೀಯ ವ್ಯವಸ್ಥೆಗೆ ಕಪ್ಪುಚುಕ್ಕೆ ಇದ್ದಂತೆ. ಇವರನ್ನು ಜನರು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಈ ಉಪಚುನಾವಣೆಯಲ್ಲಿ ಪಕ್ಶ್ಂತರಿಗಳಿಗೆ ವ್ಬುದ್ದಿ ಕಲಿಸಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳುಮಾಡುತ್ತಿರುವವರ ವುರುದ್ಧ ಹೋರಾಡಲು ಣಾನೂ ಶಾಸಕನಾಗಬೇಕಿದೆ. ಅದಕ್ಕಾಗಿ ಈ ಬಾರಿ ಬೆಂಗಳೂರಿನ ಶಿವಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ಕ್ಷೇತ್ರಗಳಿಂದ ನಾನು ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ವಾಟಾಳ್ ಹೇಳಿದ್ದಾರೆ. ಯಡಿಯೂರಪ್ಪ ಎಂದರೆ ಎಡವಟ್ಟು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸಲು ನಾನು ಶಾಸಕನಾಗಬೇಕು ಎಂದು ಅವರುಹೇಳಿದ್ದಾರೆ.
ಬಂಡೀಪುರದಲ್ಲಿ ಕೇರಳ ಸಂಪರ್ಕಿಸುವ ಪರ್ಯಾಯ ರಸ್ತೆ ನಿರ್ಮಿಸುವ ಯೋಜನೆಯಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಸರ್ಕಾರ ಇದನ್ನು ಕೂಡಲೇ ವಿರೋಧಿಸಬೇಕು ಎಂದರು.