ಪ್ರಧಾನಮಂತ್ರಿ ಯವರಿಗೆ ಪತ್ರ ಬರೆದ ಪ್ರವೀಣ್ ಭಾಯ್ ತೊಗಾಡಿಯಾ.. ಆ ಪತ್ರದಲ್ಲೇನಿದೆ ಗೊತ್ತಾ..?? – ಕಹಳೆ ನ್ಯೂಸ್
ಕಹಳೆ ನ್ಯೂಸ್ ವರದಿ : ಕೆಲ ದಿನಗಳ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ “ಪ್ರವೀಣ್ ಭಾಯ್ ತೊಗಾಡಿಯಾ” ರು ಕಾಣೆಯಾಗಿ ನಂತರ ನಡೆದ ಘಟನೆಯ ಬಗ್ಗೆ ಸತ್ಯಾಸತ್ಯತೆ ಅರಿಯದೆ ಏಕಾಏಕಿ ನರೇಂದ್ರ ಮೋದಿಯವರನ್ನು ದೂರಿದ್ದ ಕೆಲವರಿಗೆ ಈ ವಿಷಯ ಅರಗಿಸಿಕೊಳ್ಳಲು ಕಷ್ಟವಾಗಬಹುದು. ಇನ್ನು ಪರಿಸ್ಥಿತಿಯ ಲಾಭ ಪಡೆಯಲು ಪ್ರವೀಣ್ ಬಾಯ್ ತೊಗಾಡಿಯಾರ ಮನೆಗೆ ಓಡಿದ್ದ ಹಾರ್ದಿಕ್ ಪಟೇಲ್ ಹಾಗು ಕಾಂಗ್ರೆಸ್ಸಿಗರೂ ಕೂಡ ಇದನ್ನ ಓದಲೇಬೇಕು..
ಪ್ರವೀಣ್ ಭಾಯ್ ತೊಗಾಡಿಯ ಹಾಗೂ ನರೇಂದ್ರ ಮೋದಿಯವರು ಸದೃಢ ರಾಷ್ಟ್ರ ಕಟ್ಟಲು ಹೊರಟ ಎರಡು ಮಹಾಶಕ್ತಿಗಳು. ಪ್ರವೀಣ್ ತೊಗಾಡಿಯಾರವರು ವಿಶ್ವ ಹಿಂದೂ ಪರಿಷತ್ತಿನ ಮೂಲಕ ಗುರುತಿಸಿಕೊಂಡರೆ ಶ್ರೀಯುತ ನರೇಂದ್ರ ಮೋದಿಯವರು ಆರ್.ಎಸ್.ಎಸ್ ಹಾಗು ಅದರ ನಂತರ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡವರು. ಇಬ್ಬರ ಸಿದ್ದಾಂತ, ನಿಲುವು, ಯೋಚನೆ ಎಲ್ಲವೂ ಒಂದೇ ಇದ್ದ ಮೇಲೆ ಇನ್ನಾವ ಭಿನ್ನಾಭಿಪ್ರಾಯವೇನು..? ಇದು ಹಲವರ ಮನಸ್ಸಲ್ಲಿ ಮೂಡಿದ್ದ ಪ್ರಶ್ನೆ.
ಹೌದು. ಕೆಲ ದಿನಗಳ ಹಿಂದೆ ನಡೆದ ಈ ಘಟನೆಯನ್ನು ಕಾರಣವಾಗಿ ಇಟ್ಟುಕೊಂಡು ಹಿಂದೂ ಸಮಾಜದ ಇಬ್ಬರು ಅಗ್ರಗಣ್ಯ ವ್ಯಕ್ತಿಗಳ ನಡುವೆ ಬೆಂಕಿ ಹಚ್ವಲು ಹೊರಟಿದ್ದ ಕೆಲವರ ಕೆಲಸಕ್ಕೆ ತಣ್ಣಿರು ಬಿಟ್ಟಂತಾಗಿದೆ.
ಈ ಗಂಭೀರ ವಿಷಯಗಳ ಸಲುವಾಗಿ ಚರ್ಚಿಸಲು ವಿಶ್ವ ಹಿಂದೂ ಪರಿಷದ್ನ (ವಿಎಚ್ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ರವರು ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿಕೊಳ್ಳಲು ಬಯಸಿದ್ದು, ಇದರ ಸಲುವಾಗಿ ರಾಷ್ಟ್ರೀಯತೆ ಮತ್ತು ಹಿಂದುತ್ವದ ಹಿನ್ನೆಲೆಯಲ್ಲಿ ವೈಮನಸ್ಯ ದೂರಮಾಡಿಕೊಳ್ಳುವುದು ಉತ್ತಮ ಎಂದು ಸಂಧಾನ ಸಂದೇಶವನ್ನು ಪ್ರಧಾನಿಗೆ ಶ್ರೀಯುತ ಪ್ರವೀಣ್ ತೊಗಾಡಿಯರವರು ರವಾನಿಸಿದ್ದಾರೆ.
“ನರೇಂದ್ರ ಭಾಯ್ ಬನ್ನಿ ನಾವಿಬ್ಬರು ಒಗ್ಗೂಡಿ ದೇಶಕ್ಕಾಗಿ ಶ್ರಮಿಸೋಣ. ನಿರುದ್ಯೋಗ ನಿವಾರಣೆ, ರೈತರ ಆರ್ಥಿಕ ಸಂಕಷ್ಟ ಪರಿಹಾರ ಮತ್ತು ಜನರ ಆರೋಗ್ಯ ಸುಧಾರಿಸುವ ಮಹತ್ತರ ಗುರಿಗಳು ನಮ್ಮ ಮುಂದಿವೆ. ಶಿಕ್ಷಣದ ವೆಚ್ಚ ತಗ್ಗಿಸುವ, ರಾಮಮಂದಿರ ನಿರ್ಮಾಣಕ್ಕೆ ಕಾಯ್ದೆ ರೂಪಿಸುವ, ಗೋಸಂರಕ್ಷಣೆ, ಕಾಶ್ಮೀರದಲ್ಲಿ ಹಿಂದುಗಳಿಗೆ ಭದ್ರತೆ ಒದಗಿಸುವ ಭರವಸೆಗಳನ್ನು ನಾವು ನೀಡಿದ್ದೇವೆ, ಅದನ್ನು ಪೂರೈಸಬೇಕಿದೆ. ಹಾಗಾಗಿ ನಮ್ಮ ಭಿನ್ನಾಭಿಪ್ರಾಯ ಹೋಗಲಾಡಿಸಿಕೊಳ್ಳಲು ಚರ್ಚೆ ನಡೆಸೋಣ. ನಾವಿಬ್ಬರು ಹಳೆಯ ಸ್ನೇಹಿತರು, ಒಟ್ಟಿಗೆ ಕೂತು ಮಾತನಾಡೋಣ ಬನ್ನಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಿರುವ ಸಂದೇಶದಲ್ಲಿ ತೊಗಾಡಿಯಾ ಅವರು ಹೇಳಿದ್ದಾರೆ.
ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿ ತಮ್ಮ ವಿಕೃತಗಳನ್ನು ತೋರಿಸಿಕೊಂಡ ವಿರೋಧಿಗಳಿಗೆ ಈ ಸಂಧಾನ ಸಂದೇಶ ಎಲ್ಲಿಲ್ಲದ ನೋವು ಉಂಟು ಮಾಡಿರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ!!
ವರದಿ : ಕಹಳೆ ನ್ಯೂಸ್