Wednesday, January 22, 2025
ಸುದ್ದಿ

ಚಿಂತಕ, ಸಾಮಾಜಿಕ ಮುಂದಾಳು, ಯಕ್ಷಗಾನ ಕಲಾವಿದ – ಸಂಘಟಕ, ವಿದ್ವಾಂಸ, ಸಹಕಾರಿ ಧುರೀಣ – ಅಖಿಲ ಹವ್ಯಕ ಮಹಾಸಭೆಯ ಮಾಜಿ ಅಧ್ಯಕ್ಷ, 90 ವರ್ಷದ ಚಿರ ಯುವಕ ಕಜೆ ಈಶ್ವರ ಭಟ್ ಇನ್ನಿಲ್ಲ – ಕಹಳೆ ನ್ಯೂಸ್

ಉಪ್ಪಿನಂಗಡಿ : ಸಾಮಾಜಿಕ ಕಳಕಳಿ ಹೊಂದಿನ ಧರ್ಮನಿಷ್ಠ ಸಂಘಟಕ, ಅಪ್ರತಿಮ ಚಿಂತಕ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಮಾಜಿ ಅಧ್ಯಕ್ಷರ ಧಾರ್ಮಿಕ ಮುಂದಾಳು,‌ ರಾಜಕೀಯ ಮುತ್ಸದ್ದಿಯಾಗಿ, ಹಿರಿಯ ಯಕ್ಷಗಾನ ಕಲಾವಿದರಾದ ಶೇಣಿ, ಸಾಮಗ ಕುಂಬ್ಳೆಯಂತಹ ದಿಗ್ಗಜ ಕಲಾವಿದರ ಸಮಕಾಲೀನ ಕಲಾವಿದರರಾಗಿ, ಸಂಘಟಕರಾಗಿ, ಜೇನು ವ್ಯವಸಾಯ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ, ಕ್ಯಾಡ್ಸ್ ಮಂಗಳೂರು ಇದರ ಉಪಾಧ್ಯಕ್ಷರಾಗಿ, ಉಪ್ಪಿನಂಗಡಿ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ, ಪಿ.ಎಲ್.ಡಿ. ಬ್ಯಾಂಕ್ ನ ಅಧ್ಯಕ್ಷರಾಗಿ ಅಡು ಮುಟ್ಟದ ಸೊಪ್ಪಿಲ್ಲ ಕಜೆ ಈಶ್ವರ ಭಟ್ಟರು ಕೈಆಡಿಸದ ರಂಗ ಇಲ್ಲ ಎಂಬಂತೆ ಹತ್ತು ಹಲವಾರು ರಂಗದ ಬಹುರೂಪಿ ವ್ಯಕ್ತಿತ್ವದ ಸಾದು ಉಪ್ಪಿನಂಗಡಿಯ ಕೇದಾರದ ಕಜೆ ಮನೆಯ ಈಶ್ವರ ಭಟ್ ಇಂದು ಮುಂಜಾನೆ 1.15 ರ ಬೆಳಗ್ಗೆ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಈಶ್ವರ ಭಟ್ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಪರಮಾತ್ಮನ ಪಾದ ಸೇರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ, ಡಾ. ಗೋವಿಂದಪ್ರಸಾದ್ ಕಜೆ ಹಾಗೂ ಮಗಳು ವೀಣಾ ಶಾಸ್ತ್ರಿ ಮತ್ತು ಪತ್ನಿ ಇಂದಿರಾ ಕಜೆ ಇವರನ್ನು ಮೃತರು ಅಗಲಿದ್ದಾರೆ.

ಇಂದು ಬೆಳಗ್ಗೆ 7.00ಗಂಟೆಯಿಂದ ಮೃತರ ಕೇದಾರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.