Tuesday, January 21, 2025
ಸಿನಿಮಾ

ಕಿರಿಯ ಕಲಾವಿದನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಕಿರು ತೆರೆ ನಟಿ-ಕಹಳೆ ನ್ಯೂಸ್

ಕಿರುತೆರೆ ನಟಿಯೊಬ್ಬರು ತನ್ನ ಮೇಲೆ ಮೇಲೆ ಕಿರಿಯ ಕಲಾವಿದ ಅತ್ಯಾಚಾರ ಎಸಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಕಿರಿಯ ಕಲಾವಿದನ ಪತ್ತೆಯಲ್ಲಿ ತೊಡಗಿದ್ದಾರೆ.

‘ಕಹಾನಿ ಘರ್ ಘರ್ ಕಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ, ಹರಿಯಾಣದ ಯಮುನಾ ನಗರ ಮೂಲದ ಕಿರಿಯ ಕಲಾವಿದನೊಂದಿಗೆ ಆತ್ಮೀಯರಾಗಿದ್ದರೆಂದು ಹೇಳಲಾಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಆತ ಹೋಟೆಲ್ ಗೆ ಕರೆದುಕೊಂಡು ಹೋಗಿ ಮಾದಕ ವಸ್ತು ಸೇವಿಸಲು ನೀಡಿದ ಬಳಿಕ ಅತ್ಯಾಚಾರ ಎಸಗಿರುವುದಾಗಿ ನಟಿ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದಾಗಿ ಈಗ ನಾನು ಗರ್ಭಿಣಿಯಾಗಿದ್ದು, ವಿವಾಹವಾಗಲು ಕೇಳಿದರೆ ನಿರಾಕರಿಸಿದ್ದಾನೆ. ಆತನಿಗೆ ಅವನ ಕುಟುಂಬ ಸದಸ್ಯರೂ ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿರುವ ನಟಿ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು