Wednesday, January 22, 2025
ಸುದ್ದಿ

ರಾನು ಮೊಂಡಲ್ ‌ʼಮೇಕಪ್ʼ ಫೋಟೋ ವೈರಲ್-ಕಹಳೆ ನ್ಯೂಸ್

ರೈಲ್ವೇ ಸ್ಟೇಷನ್ ಬಳಿ ಹಾಡುತ್ತಾ ಕುಳಿತಿದ್ದ ರಾನು ಮೊಂಡಲ್ ಇದೀಗ ದೊಡ್ಡ ಸ್ಟಾರ್ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಟಾರ್ ಗಿರಿ ಬಂದ ಮೇಲೆ ರಾನು ಮೊಂಡಲ್ ಅಪವಾದಗಳನ್ನೂ ಎದುರಿಸುತ್ತಿದ್ದಾರೆ‌. ಕೆಲವು ದಿನಗಳ ಹಿಂದೆಯಷ್ಟೆ ರಾನು ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಅಭಿಮಾನಿಯೊಬ್ಬರು ರಾನು ಬಳಿ ಫೋಟೋ ತೆಗೆಸಿಕೊಳ್ಳಲು ಬಂದಾಗ ಕೈ ಮುಟ್ಟಿದರು ಎಂಬ ಕಾರಣಕ್ಕೆ ರಾನು ರೇಗಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ನೆಟ್ಟಿಗರು ಸಿಟ್ಟಿಗೇಳುವಂತೆ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ರಾನು ಅವರು ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ರಾನು ಮೊಂಡಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಬಂದ ರಾನು ಫುಲ್ ಮೇಕಪ್ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿತ್ತು. ಈ ಮೇಕಪ್ ಫೋಟೋ ನೋಡಿದ ನೆಟ್ಟಿಗರು ಇದನ್ನು ವೈರಲ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ವೈರಲ್ ಆದ ಈ ಫೊಟೋದಲ್ಲಿ ರಾನು ಸಂಪೂರ್ಣವಾಗಿ ಡಿಸೈನರ್ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಬೆಳ್ಳಗೆ ಕಾಣಿಸುತ್ತಿದ್ದಾರೆ. ರಾನು ಅವರ ಈ ಫೋಟೋ ನಿಜವಾದ ಫೋಟೋನಾ ಅಥವಾ ಫೋಟೋ ಶಾಪ್ ಮಾಡಿರುವುದಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.