Monday, January 20, 2025
ಸಿನಿಮಾ

ಬಿಗ್ ಬಾಸ್’ ಮನೆಯಿಂದ ಜೈ ಜಗದೀಶ್ ಗೆ ‘ಗೇಟ್ ಪಾಸ್’ ನೀಡಲು ಕಾರಣ ಏನು – ಕಹಳೆ ನ್ಯೂಸ್

ಸಿನಿಮಾ ಡೆಸ್ಕ್ : ಬಿಗ್ ಬಾಸ್ ಕನ್ನಡ ಸೀಸನ್ 7 ರ ಈ ವಾರದ ಎಲಿಮಿನೇಶ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಜೈ ಜಗದೀಶ್ ಔಟ್ ಆಗಿದ್ದಾರೆ. ಆದರೆ ಈ ಎಪಿಸೋಡ್ ಇನ್ನೂ ಅಧಿಕೃತವಾಗಿ ಪ್ರಸಾರವಾಗಿಲ್ಲ. ಮೂಲಗಳ ಪ್ರಕಾರ ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ.

ಜೈ ಜಗದೀಶ್ ಹೊರಬರಲು ಕಾರಣ ಏನು.?

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗ್ ಬಾಸ್ ಮನೆಯಲ್ಲಿ ಜೈ ಜಗದೀಶ್ ಸೀನಿಯರ್ ಆಗಿದ್ದರು. ಎಲ್ಲರ ಜೊತೆ ಕೂಡ ಬೆರೆಯುತ್ತಿದ್ದರು, ಆದರೆ ತಮ್ಮಕೈಲಾದಷ್ಟು ಟಾಸ್ಕ್ ಆಡುತ್ತಿದ್ದರು. ಇನ್ನೂ ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಆಗಾಗ ಕೆಟ್ಟ ಪದ ಬಳಸುತ್ತಾರೆಎಂಬ ಆರೋಪ ಕೂಡ ಬಿಗ್ ಬಾಸ್ ಮನೆ ಮಂದಿಯಿಂದ ಕೇಳಿಬಂದಿತ್ತು. ಇದು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆ ಕೂಡ ಆಗಿತ್ತು; ಇನ್ನೂ, ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಮೊದಲನೇ ಮದುವೆ ಮತ್ತು ಮಗಳು ಅರ್ಪಿತಾ ಬಗ್ಗೆ ಹೇಳಿದ ಕತೆಯಂತೂ ಎಲ್ಲರ ಕಣ್ಣಿನಲ್ಲಿ ನೀರು ತರಿಸಿತ್ತು.ಮತ್ತೆ ಜೈಜಗದೀಶ್ ಯಾವಾಗಲೂ ಈಗಲೇ ಮನೆಗೆ ಕಳಿಸಿಬಿಡಿ ಮನೆಗೆ ಹೋಗಿ ಬಿಡ್ತೀನಿ ಅಂತ ಪದೇ ಪದೇ ಮಾತಾಡ್ತಾ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವಾರ ಚೈತ್ರಾ ಕೊಟ್ಟೂರ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಇದೀಗ ಈ ವಾರ ಜೈ ಜಗದೀಶ್ ಔಟ್ ಆಗಿದ್ದಾರೆ. ವೀಕೆಂಡ್ ಬಂತೆಂದ್ರೆ ಸಾಕು ಕಿರುತೆರೆ ವೀಕ್ಷಕರಿಗೆ ಒಂಥರಾ ಟೆನ್ಶನ್, ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂದು, ಈಗ ಜೈ ಜಗದೀಶ್ ಔಟ್ ಆಗಿದ್ದಾರೆ. ಈ ಎಪಿಸೋಡ್ ಇಂದು ಪ್ರಸಾರವಾಗುತ್ತಿದೆ