ಬೆಂಗಳೂರು: ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ವಾಟ್ಸಾಪ್ ಬಳಕೆದಾರರಿಗೆ ವಿಶೇಷವಾಗಿ ರಚಿಸಲಾದ ಎಂಪಿ4 ವಿಡಿಯೊ ಫೈಲ್ ಅನ್ನು ಕಳುಹಿಸುವ ಮೂಲಕ ಹ್ಯಾಕರ್ ಗಳು ವಾಟ್ಸಾಪ್‌ನಲ್ಲಿ ಸ್ಟಾಕ್ ಆಧಾರಿತ ಬಫರ್ ಓವರ್‌ಫ್ಲೋ ವೈರಸ್ ಬಿಟ್ಟಿದ್ದಾರೆ.
ಹಾಗಾಗಿ ಯಾರಾದರೂ ನಿಮಗೆ ವಿಡಿಯೊ ಕಳಿಸಿದರೆ ಅದನ್ನು ತೆರೆಯುವ ಮುನ್ನ ಸ್ವಲ್ಪ ಎಚ್ಚರವಹಿಸಿ ಎಂದು ಹೇಳಿದೆ.!