ಟೆಲಿಕಾಂ ಕಂಪನಿ ಜಿಯೋ ಅಗ್ಗದ ಹಾಗೂ ಹೆಚ್ಚು ಡೇಟಾ ನೀಡುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಲು ಹೊಸ ಹೊಸ ಪ್ರಯೋಗಗಳನ್ನು ಕಂಪನಿ ಮಾಡ್ತಿರುತ್ತದೆ. ಜಿಯೋ ಕೆಲ ದಿನಗಳ ಹಿಂದಷ್ಟೆ ಆಲ್ ಇನ್ ಒನ್ ಯೋಜನೆಯನ್ನು ಜಾರಿಗೆ ತಂದಿತ್ತು. ನೀವು ಜಿಯೋ ಗ್ರಾಹಕರಾಗಿದ್ದರೆ ಈ ಪ್ಲಾನ್ ಗಳ ಬಗ್ಗೆ ತಿಳಿದಿರಿ.
ಜಿಯೋ ತನ್ನ 444 ರೂಪಾಯಿ ಪ್ಲಾನ್ ನಲ್ಲಿ ಐಯುಸಿ ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಲಭ್ಯವಾಗಲಿದೆ. ಜಿಯೋ ನೆಟ್‌ವರ್ಕ್‌ನಲ್ಲಿ ಉಚಿತ ಅನಿಯಮಿತ ಕರೆ ಸೌಲಭ್ಯ ಸಿಗ್ತಿದೆ. ಇತರ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು 1000 ಐಯುಸಿ ನಿಮಿಷಗಳನ್ನು ಸಹ ನೀಡಲಾಗುತ್ತಿದೆ. ಪ್ರತಿ ದಿನ 100 ಎಸ್‌ಎಂಎಸ್ ಸಿಗಲಿದೆ. ಯೋಜನೆಯ ಸಿಂಧುತ್ವವು 84 ದಿನಗಳಾಗಿದ್ದು, ಮಾನ್ಯತೆಯ ಸಮಯದಲ್ಲಿ 168 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ.
299 ರೂಪಾಯಿಗಳ ಯೋಜನೆಯಲ್ಲಿ 3 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಾಗುವುದು. ಇದರೊಂದಿಗೆ ಜಿಯೋ ನೆಟ್‌ವರ್ಕ್‌ನಲ್ಲಿ ಉಚಿತ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿರುತ್ತದೆ. ಇದರೊಂದಿಗೆ 100 ಎಸ್‌ಎಂಎಸ್ ಸಹ ಲಭ್ಯವಾಗುತ್ತಿದೆ. ಯೋಜನೆಯ ಸಿಂಧುತ್ವವು 28 ದಿನಗಳು. ಇದರ ಮಾನ್ಯತೆಯ ಸಮಯದಲ್ಲಿ 84 ಜಿಬಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ.
399 ರೂಪಾಯಿಗಳ ಯೋಜನೆಯಲ್ಲಿ 1.5 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಾಗುವುದು. ಯೋಜನೆಯ ಸಿಂಧುತ್ವವು 84 ದಿನಗಳು. ಒಟ್ಟು 126 ಜಿಬಿ ಡೇಟಾ ಸಿಗಲಿದೆ.