Sunday, November 24, 2024
ಸುದ್ದಿ

ಡಿ.21 ರಿಂದ ಜ.1ರ ತನಕ ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿನಲ್ಲಿ 2006ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಮಾತ್ರವಲ್ಲದೆ ರಾಜ್ಯಾದ್ಯಂತ ಹೆಸರುಗಳಿಸಿದ ಈ ಸಂಸ್ಥೆಯು ಜಿಲ್ಲಾದ್ಯಾಂತ ಸುಮಾರು 43 ಶಾಖೆಯನ್ನು ಅರಂಭಿಸಿದೆ.

ಇನ್ನೂ ಈ ಸಂಸ್ಥೆಯಲ್ಲಿ ಸರಿ ಸುಮಾರು 5300 ಕ್ಕಿಂತ ಅಧಿಕ ಮಕ್ಕಳು ಯಕ್ಷಗಾನ, ಸಂಗೀತ, ಜಾನಪದ ನೃತ್ಯ, ಚೆಂಡೆ, ನಾಟಕ ಕಲೆ ಇದೇ ತರಹ ಹಲವು ಸಾಂಸ್ಕøತಿಕ ಚಟುವಟಿಕೆಗಳ ತರಬೇತಿ ಹಾಗೂ ಪ್ರದರ್ಶನ ನಡೆಸುತ್ತಿದ್ದಾರೆ ಹಲವಾರು ಯುವ ಪ್ರತಿಭೆಗಳನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿದ ಹೆಮ್ಮೆ ಈ ಸಂಸ್ಥೆಗಿದೆ.
ಬಂಟ್ವಾಳ ತಾಲ್ಲೂಕಿನಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತ, ಜಾನಪದ ಕಲೆ, ನೃತ್ಯ ಚಿತ್ರಕಲೆ ಹಾಗೂ ನಾಟಕ ತರಬೇತಿಯನ್ನು ಎಳೆಯರಿಗೆ ನೀಡಬೇಕು ಈ ಮೂಲಕ ಎಳೆಯ ಪ್ರತಿಭೆಗಳ ಸಾಮಥ್ಯ ಸಾಧ್ಯವಾಗಬೇಕು ಎಂಬ ಉದ್ದೇ   ಶದಿಂದ ಸಮಾನ ಮನಸ್ಕ ಮಿತ್ರರೊಂದಿಗೆ ರೂಪುಗೊಂಡ ಸಂಸ್ಥೆ ಚಿಣ್ಣರಲೋಕ ಮೊಕೆದ ಕಲಾವಿದೆರ್ ಸೇವಾ ಟ್ರಸ್ಟ್ ರಿ ಬಂಟ್ವಾಳ ಈ ಸಂಸ್ಥೆ ಈಗಾಗಲೇ ಹಲವು ಕಡೆ ಶಾಖೆಯನ್ನು ಹೊಂದಿದ್ದು ಕಲೆಯ ಅನುಸಾರವಾಗಿ ವಿವಿಧ ತಜ್ಞರಿಂದ ಎಳೆಯ ಮಕ್ಕಳಿಗೆ ತರಬೇತಿಯನ್ನು ನಡೆಸುತ್ತಾ ಬರುತ್ತಿದೆ.
2018- 19 ರ ಕರಾವಳಿ ಕಲೋತ್ಸವಕ್ಕೆ ಜನ ಮೆಚ್ಚುಗೆ.
ಹೌದು ಕಳೆದ ಬಾರಿ ಡಿಸೆಂಬರ್‍ನಲ್ಲಿ ಬಿ.ಸಿ.ರೋಡ್ ಗಾಣದಪಡ್ಪು ಬಳಿ ಕರಾವಳಿ ಕಲೋತ್ಸವವೆಂಬ ವಿಭಿನ್ನ ಕಾರ್ಯಕ್ರಮವನ್ನು ಸುಮಾರು 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗಿತ್ತು. ಅಲ್ಲದೆ ಬೇರೆ ಬೇರೆ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಕರಾವಳಿ ಕಲೊತ್ಸವ ಕಾರ್ಯಕ್ರಮ ಬಂಟ್ವಾಳ ತಾಲೂಕಿನದ್ಯಾಂತವಲ್ಲದೆ, ದಕ್ಷಿಣ ಕನ್ನಡ ಜಿಲ್ಲಾದ್ಯಾಂತ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿ ನಡೆಯಲಿದೆ ಕರಾವಳಿ ಕಲೋತ್ಸವ 2019_20 ವಿನೂತನ ಕಾರ್ಯಕ್ರಮಕ್ಕೆ ಸಿದ್ದತೆಗಳು ಅರಂಭ. ಈ ಬಾರಿಯ ಕಲೋತ್ಸವ 12 ದಿನಗಳ ಕಾಲ ನಡೆಯಲಿದೆ. ಡಿಸೆಂಬರ್ 21ರಿಂದ ಜನವರಿ 1 ತನಕ ಬಂಟ್ವಾಳ ಜನತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ರಸದೌತಣ. ಚಿಣ್ಣರಲೋಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಮೋಹನ್ ದಾಸ ಕೊಟ್ಟಾರಿ ಮೂನ್ನೂರು ನೇತೃತ್ವದ ತಂಡ ಈಗಾಗಲೇ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗಿದೆ ಬಂಟ್ವಾಳದ ಗಾಣದಪಡ್ಪು ಮೈದಾನದಲ್ಲಿ ಕದ್ರಿ ಗೋಪಲನಾಥ ಕಲಾ ವೇದಿಕೆಯಲ್ಲಿ ಕರ್ನಾಟಕ ಸರಕಾರ ಕನ್ನಡ ಹಾಗೂ ಸಾಂಸ್ಕøತಿಕ ಇಲಾಖೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಜೋಡು ಮಾರ್ಗ ಉದ್ಯಾನವನದ ಬಳಿ ಕರಾವಳಿ ಕಲೋತ್ಸವ 2019_20 ಕಾರ್ಯಕ್ರಮ ನಡೆಯಲಿದೆ. ಮಕ್ಕಳ ಚಿಣ್ಣರೋತ್ಸವ, ನಾಟಕೊತ್ಸವ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ (ಚೆಂಡೆ ಸ್ಪರ್ಧೆ) ಜಾನಪದ ನೃತ್ಯ, ಭರತನಾಟ್ಯ, ಯಕ್ಷಗಾನ ಮೊದಲಾದ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ. ಡಿಸೆಂಬರ್21 ರಂದು ಕರಾವಳಿ ಕಲೋತ್ಸವ ಉದ್ಘಾಟನೆ
ಬಿಸಿರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನದ ಕಲಾಮಂಟಪದಿಂದ ಕಿರ್ತಿಶೇಷ ಕದ್ರಿ ಗೋಪಾಲನಾಥ ಕಲಾ ವೇದಿಕೆಯತ್ತ ಭವ್ಯ ಮೆರವಣಿಗೆ ಸಾಗಲಿದ್ದು ಈ ಸಂದರ್ಭ ಜಿಲ್ಲೆ, ರಾಜ್ಯದ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿದೆ. ಬಳಿಕ ಕರಾವಳಿ ಕಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರಗಲಿದೆ. ಇನ್ನೂ ಇದೇ ಸಮಯದಲ್ಲಿ ವಿವಿಧ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ಪ್ರಮುಖ ಗಣ್ಯರು ನೇರೆವೆರಿಸಲಿದ್ದಾರೆ. ಬಳಿಕ ನಡೆಯುವ ಪ್ರಮುಖ ಸಮಾರಂಭದಲ್ಲಿ ಕರಾವಳಿ ಸೌರಭ ಪ್ರಶಸ್ತಿ ಹಾಗೂ ಚಿಣ್ಣರ ಪ್ರಶಸ್ತಿಯನ್ನು ನೀಡಿ ಅರ್ಹ ವ್ಯಕ್ತಿಗಳನ್ನು ಗೌರವಿಸಲಿದ್ದಾರೆ. ಅಲ್ಲದೆ ವಿವಿಧ ವಿಭಾಗದಲ್ಲಿ ಸಾಂಸ್ಕøತಿಕ ಸ್ಪರ್ಧೆಯನ್ನು ಅಯೋಜಿಸಲಾಗಿದೆ. ಮನರಂಜನೆಗಾಗಿ ಅಟೋಪಕರಣಗಳ ವಿಸ್ಮಯ ಲೋಕ, ಬೃಹತ್ ಅಮ್ಯೂಸ್ ಮೆಂಟ್ ಪಾಕ್, ಕರಾವಳಿ ಸಾರಥಿ ಎಕ್ಸ್ ಪೆÇೀ 2019ಯಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಇನ್ನೂ ಈ ಮೇಳದಲ್ಲಿ ಗೃಹೋಪಯೋಗಿ ವಸ್ತುಗಳ, ಮಹಿಳೆಯರ ಅಭರಣ ವಸ್ತುಗಳು, ಮಕ್ಕಳ ಅಟಿಕೆ ಸಾಮಾನುಗಳ ಮಾರಾಟಕ್ಕಿವೆ ಇದರ ಸದುಪಯೋಗವನ್ನು ಗ್ರಾಹಕರು ಪಡೆಯಲು ಒಂದು ಉತ್ತಮ ವೇದಿಕೆಯಾಗಲಿದೆ
ಒಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಜನತೆಗೆ 12 ದಿನಗಳ ಕಾಲ ನಡೆಯುವ ಕರಾವಳಿ ಕಲೋತ್ಸವ ಮನರಂಜನೆಯ ಜೊತೆಗೆ ಸಾಂಸ್ಕøತಿಕ ಕ್ಷೇತ್ರದಲ್ಲಿ ಬೆಳೆಯುವ ಪ್ರತಿಭೆಗಳಿಗೆ ಕಲೆಯನ್ನು ಗುರುತಿಸುವ ಮಹೋನ್ನತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು