Thursday, November 28, 2024
ಸುದ್ದಿ

ಬುಡೋಳಿ ನಿವಾಸಿ ಅಣ್ಣಿಪೂಜಾರಿ ಮೃತ – ಕಹಳೆ ನ್ಯೂಸ್

ಬಂಟ್ವಾಳ: ನವೆಂಬರ್ 18 ರಂದು ಕಲ್ಲಡ್ಕದಲ್ಲಿ ಪಾದಚಾರಿಗೆ ಸರಕಾರಿ ಬಸ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಾಣಿ ಸಮೀಪದ ಬುಡೋಳಿ ನಿವಾಸಿ ಅಣ್ಣಿಪೂಜಾರಿ ಮೃತಪಟ್ಟವರು. ಕಲ್ಲಡ್ಕ ರಸ್ತೆ ಬದಿಯಲ್ಲಿ ನಿಂತಿದ್ದಾಗ ಸರಕಾರಿ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಅಣ್ಣಿ ಪೂಜಾರಿ ಅವರಿಗೆ ಗಂಭೀರ ಗಾಯಗಳಾಗಿದೆ, ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ತಲೆಗೆ ಗಂಭೀರವಾದ ಗಾಯಗಳಾಗಿದ್ದ ಕಾರಣ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಬ್ಯಾಂಡ್ ಅಣ್ಣಿ ಪೂಜಾರಿ ಎಂದೇ ಚಿರಪರಿಚಿತರಾಗಿರುವ ಇವರು ಬ್ಯಾಂಡ್ ವೃತ್ತಿ ಮಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ವರ್ಷಗಳ ಹಿಂದೆ ಇವರ ಅವಿವಾಹಿತ ಮಗ ಉಮೇಶ್ ಕೂಡಾ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಠಾಣಾ ಪೆÇೀಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.