ಪುತ್ತೂರು : ಮಂಗಳೂರಿನ ಬಷೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಹಲ್ಲೆ ನಡೆದ ದಿನದಿಂದ ಈತ ಪೋಲಿಸ್ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಬಂಧಿತ ಆರೋಪಿಯನ್ನು ಬಂಟ್ವಾಳದ ಕೇಪು ನಿವಾಸಿ ಅಭಿ ಅಲಿಯಾಸ್ ಅಭಿಷೇಕ್ ಆರ್ ಎಸ್ ಎಂದು ಗುರುಸಿಸಲಾಗಿದೆ.
ಸಂಜೆ ಸುಮಾರು 6 ಗಂಟೆಯ ವೇಳೆಗೆ ಪುತ್ತೂರಿನ ಬನ್ನೂರು ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ನಂತರ ತನಿಖಾಧಿಕಾರಿಯವರ ಮುಂದೆ ಹಾಜರು ಪಡಿಸಲಾಗಿದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಕಾವೂರು ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ಕೆ ಆರ್ ನಾಯ್ಕ, ಹೆಡ್ ಕಾನ್ಸ್ಟೇಬಲ್ ಗಳಾದ ಯಶವಂತ ಗೌಡ, ಬಾಲಕೃಷ್ಣ ದುರ್ಗಾ ಪ್ರಸಾದ್ ಶೆಟ್ಟಿ ವಿಶ್ವನಾಥ ರಾಜಶೇಖರ ಗೌಡ , ಪ್ರಮೋದ್ ಎ. ಎಸ್ , ಕಾನ್ಸ್ಟೇಬಲ್ ಗಳಾದ ಕೇಶವ , ಚೆರಿಯನ್ , ರಶೀದ್ ಶೇಖ್, ವಿನಯ್ ಕುಮಾರ್ ಹೆಚ್ ಕೆ ರವರು ಭಾಗಿಯಾಗಿರುತ್ತಾರೆ.
ವರದಿ : ಕಹಳೆ ನ್ಯೂಸ್