Thursday, November 28, 2024
ಸುದ್ದಿ

ಎಕ್ಸಲೆಂಟ್ ಆಂಗ್ಲಮಾಧ್ಯಮ ಪ್ರೌಢ ಶಾಲಾ ವಾರ್ಷಿಕೋತ್ಸವ-ಕಹಳೆ ನ್ಯೂಸ್

ಮೂಡಬಿದಿರೆಯ ಕಲ್ಲಬೆಟ್ಟುವಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವವು ಸಂಸ್ಥೆಯ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಉಚ್ಚನ್ಯಾಯಾಲಯದ ಹಿರಿಯ ವಕೀಲ ಶ್ರೀ ಎಚ್. ಎಸ್.ಚಂದ್ರಮೌಳಿಯವರು ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಅದರ ಅಗತ್ಯತೆಯನ್ನು ಮನಗಂಡು
ಎಷ್ಟು ಬೇಕೋ ಅಷ್ಟೇ ಬಳಸಿ ವಿದ್ಯೆಯ ಕ್ಷೇತ್ರದಲ್ಲಿ ತಮ್ಮ ಗುರಿವಿಧಿಸÀ ಬೇಕು ಎಂದು ಕರೆ ನೀಡಿದರು.

ಮತ್ತು ಬಾಲ್ಯಾವಸ್ಥೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಜೀವನ ಉಜ್ವಲಗೊಳಿಸಿ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ, ಸರಕಾರದ ಮುಖ್ಯ ಸಚೇತರರಾಗಿರುವ ಶ್ರೀ ವಿ. ಸುನಿಲ್ ಕುಮಾರ್ ಮಾತನಾಡಿ ನಮಗೆ ಇಂದು ಬೇಕಿರುವುದು ನವಭಾರತದ ಕನಸು, ಆ ಕನಸನ್ನು ನನಸು ಮಾಡುವ ಯುವ ಸಮೂಹ ನಮ್ಮ ದೇಶದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲ ಯುವ ಮನಸ್ಸುಗಳು ಒಂದಾದರೆ ಭಾರತವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನುಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ದಿನೇಶ್ ಚೌಟ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಂದು ಹಳ್ಳಿಯಿಂದ ಒಬ್ಬಬ್ಬ ಮಹಾಪುರುಷರು ಹುಟ್ಟಿ ಬರಬೇಕು. ದೇಶದ ಅಮೂಲ್ಯವಾದ ಸಂಪತ್ತು ರಕ್ಷಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಶ್ರೀ ಯುವರಾಜ್ ಜೈನ್ ಮಾತನಾಡುತ್ತಾ ವಿದ್ಯಾರ್ಜನೆಯ ಸಮಯದಿಂದ ಹಿಡಿದು ತಮ್ಮಜೀವನದಲ್ಲಿ ಮಾರ್ಗದರ್ಶನ ನೀಡಿದ ಹಿರಿಯರನ್ನು ನೆನಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಕಾರಯುತ ನಡವಳಿಕೆಯೇ ಶ್ರೇಷ್ಠ ಎಂದು ತಿಳಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಶಾಲಾ
ವರದಿ ವಾಚಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಸುಧಾರಾಣಿ ಸ್ವಾಗತಿಸಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ತರುಣ್
ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.