ಪುತ್ತೂರಿನ ಡಬಲ್ ಮರ್ಡರ್ನಲ್ಲಿ ತೀವ್ರ ಗಾಯಗೊಂಡ ಖತೀಜಗೆ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಯಿಂದ ರಕ್ತದಾನ-ಕಹಳೆ ನ್ಯೂಸ್
ನಿನ್ನೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪುತ್ತೂರಿನ ಕುರಿಯದಲ್ಲಿ ನಡೆದ, ಡಬಲ್ ಮರ್ಡರ್ ಘಟನೆಯಲ್ಲಿ ತೀವ್ರ ಗಾಯಗೊಂಡು ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವ, ಖತೀಜ ಅವರಿಗೆ ಹಿಂದೂ ಯುವಕನೊರ್ವ ರಕ್ತದಾನ ಮಾಡಿದ್ದಾನೆ.
ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಬಲ್ನಾಡು ಇದರ ವತಿಯಿಂದ ಗುರುರಾಜ್ ಬಲ್ನಾಡು ಇವರು ತುರ್ತು ರಕ್ತದ ಅವಶ್ಯಕತೆಗೆ ಸ್ಪಂದಿಸಿ ಂ+ ರಕ್ತದಾನ ಮಾಡಿದ್ದಾರೆ. ಮಾನವೀಯತೆಯಿಂದ ಜೀವ ಉಳಿಸುವ ಸಂದರ್ಭ ಜಾತಿ ಮತ ಧರ್ಮಗಳು ಅಡ್ಡಿ ಬರುವುದಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ. ಇನ್ನೂ ಸಾಮಾಜಿಕ ಕಳಕಳಿಯನ್ನು ಹೊಂದಿರುವ ವಿನಾಯಕ ಫ್ರೆಂಡ್ಸ್ ಚರಿಟೇಬಲ್ ಟ್ರಸ್ಟ್(ರಿ) ಬಲ್ನಾಡ್ನ ಕಾರ್ಯಕರ್ತರು ತುರ್ತು ರಕ್ತದ ಅವಶ್ಯಕತೆ ಇರುವಾಗ ತಕ್ಷಣ ಸ್ಪಂದಿಸುತ್ತಿದ್ದು ಕಳೆದ 3 ತಿಂಗಳಲ್ಲಿ 100 ಕ್ಕೂ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.