ಸಾಮಾಜಿಕ ಜಾಲತಾಣಗಳು ಎಷ್ಟು ಮುಖ್ಯ ಮತ್ತು ಯಾವ ಮಟ್ಟಿಗೆ ಪಾತ್ರ ನಿರ್ವಹಿಸುತ್ತದೆ ಎಂಬುದು ಈ ಭಿಕ್ಷುಕಿಯಿಂದ ಸಾಬೀತಾಗಿದೆ. ಇಂಟರ್ ನೆಟ್ ಮತ್ತು ಸೋಷಿಯಲ್ ಮೀಡಿಯಾ ಯಾರನ್ನ ಬೇಕಾದರೂ ದೊಡ್ಡ ಸೆಲೆಬ್ರಿಟಿ ಮಾಡುತ್ತೆ ಅನ್ನೋದಕ್ಕೆ ಸ್ಪಷ್ಟ ನಿದರ್ಶನ ರಾನು ಮಂಡಲ್. ಹೌದು ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರ ಭವಿಷ್ಯ ಬದಲಾಗಿರುವುದು ತಮ್ಮೆಲ್ಲರಿಗೂ ತಿಳಿದಿದೆ .
. ರೈಲು ಚಲಿಸುವಾಗ ಬೆಂಚ್ ಮೇಲೆ ಕುಳಿತು ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ಹಾಡುತ್ತಿರುವುದನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲು ಬಿಟ್ಟಿದ್ದ, ಈ ವೀಡಿಯೊ ದೇಶಾದ್ಯಂತ ಸಖತ್ ವೈರಲ್ ಆಗಿತ್ತು.
ಈ ವೀಡಿಯೊವನ್ನು ನೋಡಿದ ಗಾಯಕಿಯರು ಮತ್ತು ಸಿನಿಮಾ ರಂಗದವರು ಬೆರಗಾಗಿದ್ದರು.. ನಂತರ ಹಿಮೇಶ್ ರೇಶಮಿಯಾರ ಚಿತ್ರವಾದ ಹ್ಯಾಪಿ ಹಾರ್ಡಿ ಅಂಡ್ ಹೀರೋ ಚಿತ್ರದಲ್ಲಿ ಅವಕಾಶ ನೀಡಿದ್ದರು. ಹಿಮೇಶ್ ರೇಶಮಿಯಾ ಮುಂದೆ ರಾನು ಹಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.
. ವಿಡಿಯೋ ನೋಡಿದ ಪ್ರತಿಯೊಬ್ಬರು ರಾನು ಕಂಠಕ್ಕೆ ಮಾರು ಹೋಗಿದ್ದಾರೆ. ಒಂದ್ಕಡೆ ಅದೃಷ್ಟ, ಇನ್ನೊಂದು ಕಡೆ ಅತಿರೇಕದ ವರ್ತನೆಯಿಂದ ಸದ್ದು ಮಾಡುತ್ತಿರುವ ರಾನು ಮಂಡಲ್ ಮೇಕಪ್ ಮಾಡಿಕೊಂಡಿರುವ ಫೋಟೋವೊಂದು ನಿನ್ನೆ ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಷ್ಟಕ್ಕೂ ರಾನು ಈ ರೀತಿಯ ಅತಿರೇಕವಾದ ಮೇಕಪ್ ಮಾಡಿಕೊಳ್ಳಲು ಕಾರಣವಿದೆ. ಉತ್ತರ ಪ್ರದೇಶದಲ್ಲಿರುವ ಖಾನ್ ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕಾಗಿ, ಈ ರೀತಿಯ ಮೇಕಪ್ ಮಾಡಿಕೊಂಡಿದ್ದಾರೆ. ಅಲ್ಲದೇ ರಾಂಪ್ ಮೇಲೆ ಕ್ಯಾಟ್ ವಾಕ್ ಅನ್ನು ಸಹ ರಾನು ಮಂಡಲ್ ಮಾಡಿದ್ದಾರೆ. ಪೀಚ್ ಬಣ್ಣದ ಲೆಹಂಗಾ ಧರಿಸಿದ್ದ ರಾನು ಮಂಡಲ್, ಪ್ರಿಯಾಂಕಾ ಛೋಪ್ರಾ ಅಭಿನಯದ
ಫ್ಯಾಶನ್ ಚಿತ್ರದ ಹಾಡಿಗೆ ರಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಈ ರೀತಿಯ ಅತಿಯಾದ ಮೇಕಪ್ ಮತ್ತು ಉಡುಪುಗಳನ್ನು ಕಂಡ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ, ರಾನು ಮಂಡಲ್ ಅವರಿಗೆ ಮೇಕಪ್ ಮಾಡಿದ್ದು ಓರ್ವ ಮೇಕಪ್ ಆರ್ಟಿಸ್ಟ್ ಆದರೂ, ಓವರ್ ಮೇಕಪ್ ಮಾಡಿಕೊಂಡ ರಾನು ಮಂಡಲ್ ಫೋಟೋ ವೈರಲ್ ಆಗುತ್ತಿದ್ದಂತೆ ಟ್ರೋಲಿಗರಿಗೆ ಆಹಾರವಾಯಿತು. ಭಿನ್ನ ವಿಭಿನ್ನ ಮೀಮ್ ಗಳ ಮೂಲಕ ಟ್ರೋಲಿಗರು ರಾನು ಮಂಡಲ್ ಕಾಲೆಳೆದಿದ್ದಾರೆ. ಟ್ರೋಲ್ ಗಳಿಗೆ ಆಹಾರವಾಗಿರುವ ರಾನು, ಹೇಗೆಲ್ಲಾ ಟ್ರೋಲ್ ಆಗುತ್ತಿದ್ದಾರೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮಂಡಲ್ ಇದೀಗ ಜೋಕರ್ ಆಗಿದ್ದಾರಾ.?
ಈ ಒಂದು ಮೀಮ್ ನಲ್ಲಿ ವಿವರಿಸಲು ಸಾಧ್ಯವಾಗದ ಹಲವು ಅರ್ಥಗಳಿವೆ. ರಾತ್ರೋರಾತ್ರಿ ದಿಡೀರ್ ಅಂತ ಸಾಮಾಜಿಕ ಜಾಲತಾಣಗಳ ಮುಖಾಂತರ ಸ್ಟಾರ್ ಆದ ರಾನು ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಮಾರ್ಕೆಟ್ ವೊಂದಲ್ಲಿ ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಬಂದ ಅಭಿಮಾನಿಯನ್ನು ಡೋಂಟ್ ಟಚ್ ಮಿ ಅಂತ ರಾನು ಮಂಡಲ್ ಹೇಳಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಫ್ಯಾಶನ್ ಲೋಕಕ್ಕೂ ರಾನು ಮಂಡಲ್ ಕಾಲಿಟ್ಟಿದ್ದು, ಆಕೆಯ ಕಾಲನ್ನ ನೆಟ್ಟಿಗರು ಎಳೆಯುತ್ತಿದ್ದಾರೆ.